ಬೆಂಗಳೂರು: ಬೆಂಗಳೂರಿನ ಯಂಗ್ ಪೈನೀರ್ ಕ್ರಿಕೆಟ್ ಕ್ಲಬ್ ತಂಡದ ಸ್ಪಿನ್ನರ್ ಸರ್ಫ್ರಾಜ್ ಅಶ್ರಾಫ್ ಒಂದು ರನ್ ನೀಡದೆ ಎದುರಾಳಿ ತಂಡದ 6 ವಿಕೆಟ್ ಕಬಳಿಸುವ ಮೂಲಕ ಕ್ರಿಕೆಟ್ ನಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ.
ಸೋಮವಾರ ನಡೆದ ಕೆಎಸ್ಸಿಎ ಕ್ಲಬ್ ತಂಡಗಳ ಟಿ20 ಟೂರ್ನಿಯ ಪಂದ್ಯದಲ್ಲಿ ಯಂಗ್ ಪೈನೀರ್ ಸಿಸಿ ತಂಡದ ಸರ್ಫ್ರಾಜ್ ಮೂರು ಓವರ್ ಗಳನ್ನು ಮಾಡಿದ್ದಾರೆ. ಈ ಮೂರು ಓವರ್ ಗಳು ಮೇಡನ್ ಆಗಿದ್ದು ಹ್ಯಾಟ್ರಿಕ್ ಸೇರಿದಂತೆ 6 ವಿಕೆಟ್ ಪಡೆದಿದ್ದಾರೆ.
ಟೂರ್ನಿಯಲ್ಲಿ ಮೊದಲ ಬ್ಯಾಟ್ ಮಾಡಿದ ಯಂಗ್ ಪೈನೀರ್ ತಂಡದ ನಿಗದಿತ ಓವರ್ ನಲ್ಲಿ 4 ವಿಕೆಟ್ ಕಳೆದುಕೊಂಡು 264 ರನ್ ಪೇರಿಸಿತು. ಈ ಗುರಿ ಬೆನ್ನತ್ತಿದ ಮರ್ಕೆರಾ ಯೂತ್ ಸಿಸಿ ತಂಡ 14.3 ಓವರ್ ಗಳಲ್ಲಿ ಕೇವಲ 57 ರನ್ ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಯಂಗ್ ಪೈನೀರ್ ತಂಡದ 207 ರನ್ ಗಳಿಂದ ಭರ್ಜರಿ ಜಯ ಸಾಧಿಸಿದೆ.
Comments are closed.