ಕ್ರೀಡೆ

ಒಬ್ಬ ಮುಸ್ಲಿಂ ಆಗಿ ತಾವು ಭಾರತದ ಪರ ಏಕೆ ಆಡುತ್ತೀರಿ? ಎಂಬ ಪಾಕ್ ಹುಡುಗಿಯ ಪ್ರಶ್ನೆಗೆ ಇರ್ಫಾನ್ ಪಠಾಣ್ ಕೊಟ್ಟ ದಿಟ್ಟ ಉತ್ತರ ಏನು ಗೊತ್ತಾ..?

Pinterest LinkedIn Tumblr

ಹೈದರಾಬಾದ್: ಟೀಂ ಇಂಡಿಯಾ ವೇಗದ ಆಟಗಾರ ಇರ್ಫಾನ್ ಪಠಾಣ್ ಇತ್ತೀಚೆಗೆ ತಮ್ಮ ಜೀವನದಲ್ಲಿ ನಡೆದ ಘಟನೆಯೊಂದರ ಬಗ್ಗೆ ಮಾಹಿತಿ ನೀಡಿದ್ದಾರೆ.

ನಾಗಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಲಾಹೋರ್ ನಲ್ಲಿ ಒಮ್ಮೆ ಪಾಕಿಸ್ತಾನ ಹುಡುಗಿ ಕೇಳಿದ ಪ್ರಶ್ನೆಗೆ ತಾವು ಹೇಗೆ ಉತ್ತರ ನೀಡಿದ್ದೆ ಎಂಬುದನ್ನು ತಿಳಿಸಿದ್ದಾರೆ.

ಒಬ್ಬ ಮುಸಲ್ಮಾನನಾಗಿದ್ದು ನೀವು ಏಕೆ ಭಾರತದ ಪರ ಕ್ರಿಕೆಟ್ ಆಡುತ್ತೀರಿ ಎಂಬ ಯುವತಿ ಕೇಳಿದ್ದಳು, ಅದಕ್ಕೆ ಬರೋಡಾ ಮೂಲದ ಇರ್ಫಾನ್ ಪಠಾಣ್ ನೀಡಿದ್ದ ಉತ್ತರ ಹೀಗಿತ್ತು,

‘ಭಾರತದ ಪರವಾಗಿ ಆಡುವುದೇ ಒಂದು ಹೆಮ್ಮೆಯ ವಿಷಯ,ಆ ಘಟನೆಯನ್ನು ನೆನಪಿಸಿಕೊಂಡರೇ ನನಗೆ ಮತ್ತಷ್ಟು ಉತ್ತಮವಾಗಿ ಕ್ರಿಕೆಟ್ ಆಡಬೇಕು ಎಂದೆನಿಸುತ್ತದೆ, ಒಬ್ಬ ಕ್ರಿಕೆಟ್ ಆಟಗಾರನಾಗಿ ನಾನು ವೃತ್ತಿ ಬದುಕಿನಲ್ಲಿ ಹೆಮ್ಮೆ ಪಡುವಂತ ಅನೇಕ ವಿಷಯಗಳಿವೆ’ ಎಂದು ಪಠಾಣ್ ಹೇಳಿದ್ದಾರೆ. ಮಾಜಿ ಟೀಂ ಇಂಡಿಯಾ ಕ್ಯಾಪ್ಟನ್ ಸೌರವ್ ಗಂಗೂಲಿ ಅವರಿಂದ ಕ್ಯಾಪ್ ಪಡೆದ ಮಧುರ ಕ್ಷಣಗಳನ್ನು ಪಠಾಣ್ ಸ್ಮರಿಸಿದ್ದಾರೆ.

Comments are closed.