ಕ್ರೀಡೆ

ಆಸೀಸ್ ಸರಣಿಗೆ ಟೀಂ ಇಂಡಿಯಾ ಪ್ರಕಟ

Pinterest LinkedIn Tumblr


ಮುಂಬೈ(ಫೆ.14): ಇದೇ ತಿಂಗಳು 23ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ದದ ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ಟೀಂ ಇಂಡಿಯಾ ತಂಡವನ್ನು ಆಯ್ಕೆಮಂಡಳಿ ಪ್ರಕಟಿಸಿದ್ದು, ಯಾವುದೇ ಬದಲಾವಣೆ ಮಾಡದೆ ಬಾಂಗ್ಲಾದೇಶ ವಿರುದ್ಧ ಆಡಿದ ಆಟಗಾರರಿಗೆ ಮತ್ತೊಮ್ಮೆ ಮಣೆ ಹಾಕಲಾಗಿದೆ.
ವಿರಾಟ್ ಕೊಹ್ಲಿ ನೇತೃತ್ವದಲ್ಲಿ 16 ಮಂದಿಯನ್ನೊಳಗೊಂಡ ತಂಡವನ್ನು ಪ್ರಕಟಿಸಲಾಗಿದ್ದು ಗಾಯಾಳು ರೋಹಿತ್ ಶರ್ಮಾ ತಂಡಕ್ಕೆ ಮರಳುವಲ್ಲಿ ವಿಫಲರಾಗಿದ್ದಾರೆ. ಇದರ ಜೊತೆಗೆ ಇಂಗ್ಲೆಂಡ್ ಟೆಸ್ಟ್ ವೇಳೆ ಗಾಯಗೊಂಡಿದ್ದ ವೇಗದ ಬೌಲರ್ ಮೊಹಮ್ಮದ್ ಶಮಿ ಕೂಡ ತಂಡದಲ್ಲಿ ಸ್ಥಾನಪಡೆಯಲು ಸಾಧ್ಯವಾಗಿಲ್ಲ.
ಭಾರತ ತಂಡವು ಆಸೀಸ್ ವಿರುದ್ಧ ಪುಣೆ, ರಾಂಚಿ, ಬೆಂಗಳೂರು ಮತ್ತು ಧರ್ಮಶಾಲಾದಲ್ಲಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ.
ಭಾರತ ತಂಡ ಇಂತಿದೆ:
ವಿರಾಟ್ ಕೊಹ್ಲಿ(ನಾಯಕ), ಮುರಳಿ ವಿಜಯ್, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ಅಜಿಂಕ್ಯಾ ರಹಾನೆ, ವೃದ್ಧಿಮಾನ್ ಸಾಹಾ, ಆರ್ ಅಶ್ವಿನ್, ರವೀಂದ್ರ ಜಡೇಜಾ, ಇಶಾಂತ್ ಶರ್ಮಾ, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್, ಕರುಣ್ ನಾಯರ್, ಜಯಂತ್ ಯಾದವ್, ಕುಲ್ದೀಪ್ ಯಾದವ್, ಅಭಿನವ್ ಮುಕುಂದ್, ಹಾರ್ದಿಕ್ ಪಾಂಡ್ಯ.

Comments are closed.