ಕರ್ನಾಟಕ

ಶೀಘ್ರದಲ್ಲೇ ಸ್ಟಾರ್ ಸ್ಪೋರ್ಟ್ಸ್ ಕನ್ನಡ ಚಾನೆಲ್ ಆರಂಭ!

Pinterest LinkedIn Tumblr


ಬೆಂಗಳೂರು: ಕ್ರೀಡಾ ವಾಹಿನಿ ಸ್ಟಾರ್ ನೆಟ್ ವರ್ಕ್ ಶೀಘ್ರದಲ್ಲೇ ಸ್ಟಾರ್ ಸ್ಫೋರ್ಟ್ಸ್ ಕನ್ನಡ ವಾಹಿನಿಯನ್ನು ಆರಂಭಿಸಲು ತಯಾರಿ ನಡೆಸುತ್ತಿದೆ.

ಪ್ರಾದೇಶಿಕ ಚಾನೆಲ್ ಹೆಸರಲ್ಲಿ ಸ್ಟಾರ್ ನೆಟ್ ವರ್ಕ್ ಇತ್ತೀಚೆಗಷ್ಟೇ ಪ್ರಯೋಗಾರ್ಥವಾಗಿ ಸ್ಟಾರ್ ಸ್ಪೋರ್ಟ್ಸ್ ತಮಿಳು ಚಾನೆಲ್ ಅನ್ನು ಆರಂಭಿಸಿತ್ತು. ಇದಕ್ಕೆ ಪ್ರಾದೇಶಿಕ ವಲಯದಲ್ಲಿ ಅಭೂತಪೂರ್ವ ಯಶಸ್ಸು ಸಿಕ್ಕಿದ್ದರಿಂದ ಕನ್ನಡದಲ್ಲೂ ಚಾಲನೆ ಆರಂಭಿಸಲು ಸ್ಟಾರ್ ನೆಟ್ ವರ್ಕ್ ಸಿದ್ಧತೆ ನಡೆಸಿದೆ.

ಮೂಲಗಳ ಪ್ರಕಾರ ನವೆಂಬರ್ 16ರಂದು ಚಾನೆಲ್ ಆರಂಭಿಸಲು ಸ್ಟಾರ್ ನೆಟ್ ವರ್ಕ್ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ. ಪ್ರೊ ಲೀಗ್ ಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ತಂಡಗಳು ಈಗಾಗಲೇ ಇರುವುದರಿಂದ ವರ್ಷ ಪೂರ್ತಿ ಕಾರ್ಯಕ್ರಮಗಳ ಆಯೋಜನೆಗೆ ಯಾವುದೇ ಅಡ್ಡಿಯಾಗುವುದಿಲ್ಲ.

ಪ್ರೊ ಕಬಡ್ಡಿಯಲ್ಲಿ ಬೆಂಗಳೂರು, ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಐಎಸ್ಎಲ್ ನಲ್ಲಿ ಬೆಂಗಳೂರು ಎಫ್ ಸಿ, ಕರ್ನಾಟಕ ಪ್ರಿಮಿಯರ್ ಲೀಗ್ ಸೇರಿದಂತೆ ಸಾಕಷ್ಟು ಕ್ರೀಡೆಗಳಲ್ಲಿ ರಾಜ್ಯದ ಹೆಸರು ಉಲ್ಲೇಖವಾಗಿರುವುದರಿಂದ ಚಾನೆಲ್ ತೆರೆಯಲು ಸ್ಟಾರ್ ನೆಟ್ ವರ್ಕ್ ಮುಂದಾಗಿರುವುದು.

Comments are closed.