ಬೆಂಗಳೂರು: ಸೋಮವಾರ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ನೀಡಿದ ಸಲಹೆ ಇದು ಎಂಬ ‘ಟ್ವೀಟ್’ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ.
ಸಚಿನ್ ತೆಂಡೂಲ್ಕರ್ ಎಂದು ಹೆಸರಿರುವ ಮಾಸ್ಟರ್ ಬ್ಲಾಸ್ಟರ್ ಎಂಬ ಖಾತೆಯಿಂದ ಕಂಗ್ರಾಟ್ಸ್ ವಿರಾಟ್, ಹ್ಯಾಪಿ ವೆಡ್ಡಿಂಗ್ ಲೈಫ್ ಎಂದು ಟ್ವೀಟ್ ಮಾಡಲಾಗಿದೆ. ಈ ಟ್ವೀಟ್‍ಗೆ ಉತ್ತರಿಸಿದ ವಿರಾಟ್ ಕೊಹ್ಲಿ ಥ್ಯಾಂಕ್ಸ್, ಸರ್ ಏನಾದರೂ ಸಲಹೆ? ಎಂದು ಕೇಳುತ್ತಾರೆ. ಇದಕ್ಕೆ ‘ರಾತ್ರಿ ಹೆಲ್ಮೆಟ್ ಧರಿಸಿ’ ಎಂಬುದು ಸಚಿನ್ ಟ್ವೀಟ್ ಪ್ರತಿಕ್ರಿಯೆ.
ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಜತೆಗಿನ ಟ್ವೀಟ್ ಸಂಭಾಷಣೆ ಹೀಗಿದೆ ಎಂಬ ಈ ಟ್ವೀಟ್ ಫೋಟೊ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು ಇದು ನಕಲಿ ಎಂದು ಅರಿಯದೆ ಹಲವಾರು ನೆಟಿಜನ್‍ಗಳು ಇದನ್ನು ಶೇರ್ ಮಾಡುತ್ತಿದ್ದಾರೆ.
ಇಲ್ಲಿ ಟ್ವೀಟ್‍ಗಳನ್ನು ಗಮನಿಸಿದರೆ ಇದು ನಕಲಿ ಎಂಬುದು ಸ್ಪಷ್ಟವಾಗುತ್ತದೆ. ನೋಡಿದ ಕೂಡಲೇ ಸಚಿನ್ ತೆಂಡೂಲ್ಕರ್ ಅವರ ಅಧಿಕೃತ ಖಾತೆಯಿಂದ ಟ್ವೀಟ್ ಆಗಿದೆ ಎಂದು ಅನಿಸಿದರೂ ಟ್ವೀಟ್ ಮಾಡಿರುವ ಖಾತೆ @MasterBlaster. ಇದು ಸಚಿನ್ ಅವರ ಟ್ವಿಟರ್ ಖಾತೆ ಅಲ್ಲ. ಸಚಿನ್ ಅವರ ಅಧಿಕೃತ ಖಾತೆ @sachin_rt. ಸಚಿನ್ ತೆಂಡೂಲ್ಕರ್ ವಿರಾಟ್ ಮತ್ತು ಅನುಷ್ಕಾಗೆ ಶುಭ ಹಾರೈಸಿ ಮಾಡಿದ ಟ್ವೀಟ್ ಹೀಗಿದೆ.
ಈ ನಕಲಿ ಟ್ವೀಟ್ ಫೋಟೊದಲ್ಲಿರುವ ವಿರಾಟ್ ಕೊಹ್ಲಿ ಖಾತೆ ಕೂಡಾ ನಕಲಿಯೇ. ಇಲ್ಲಿರುವ ವಿರಾಟ್ ಕೊಹ್ಲಿ ಖಾತೆ ಹೆಸರು @ImVK. ವಿರಾಟ್ ಕೊಹ್ಲಿಯ ಅಧಿಕೃತ ಟ್ವಿಟರ್ ಖಾತೆ @imVkohli ಎಂದಾಗಿದೆ.
Comments are closed.