ಕ್ರೀಡೆ

ನನ್ನ ತಂಗಿಯಿಂದ ದೂರ ಇರು ಎಂದು ರೋಹಿತ್ ಶರ್ಮಾಗೆ ಎಚ್ಚರಿಕೆ ನೀಡಿದ್ದ ಯುವರಾಜ್ ಸಿಂಗ್ !

Pinterest LinkedIn Tumblr

ನವದೆಹಲಿ: ಭಾರತ ತಂಡದ ಸ್ಫೋಟಕ ಬ್ಯಾಟ್ಸಮನ್ ಯುವರಾಜ್ ಸಿಂಗ್ ನನ್ನ ತಂಗಿ ದೂರ ಇರುವಂತೆ ನನಗೆ ಎಚ್ಚರಿಕೆ ನೀಡಿದ್ದರು ಎಂದು ಭಾರತ ಕ್ರಿಕೆಟ್ ತಂಡದ ಉಪನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

ವಾಹಿನಿಯೊಂದರ ‘ಬ್ರೇಕ್‌ಫಾಸ್ಟ್‌ ವಿತ್‌ ಚಾಂಪಿಯನ್ಸ್‌’ ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕ್ರಿಕಿಟಿದ ರೋಹಿತ್ ಶರ್ಮಾ, ಹಿಂದೊಮ್ಮೆ ಕಾರ್ಯಕ್ರಮವೊಂದರಲ್ಲಿ ಸಹ ಕ್ರಿಕೆಟಿಗ ಯುವರಾಜ್ ಸಿಂಗ್ ಆಡಿದ್ದ ಮಾತುಗಳನ್ನು ನೆನಪಿಸಿಕೊಂಡಿದ್ದಾರೆ. 10 ವರ್ಷಗಳ ಹಿಂದೆ ನಡೆದ ಘಟನೆಯನ್ನು ರೋಹಿತ್‌ ಮೆಲುಕು ಹಾಕುತ್ತಾ, ಹಿಂದೊಮ್ಮೆ ಯುವಿ ನನಗೆ ಎಚ್ಚರಿಕೆ ನೀಡಿದ್ದರು. ನನ್ನ ತಂಗಿಯಿಂದ ದೂರ ಇರುವಂತೆ ಹೇಳಿದ್ದರು ಎಂದು ಹೇಳಿಕೊಂಡಿದ್ದಾರೆ.

”ಆಗ ನನಗೆ 20 ವರ್ಷ ವಯಸ್ಸು. ಜಾಹೀರಾತುವೊಂದರ ಶೂಟಿಂಗ್‌ ಗಾಗಿ ಸೆಟ್‌ ಗೆ ಹೋಗಿದ್ದೆ. ಜಾಹೀರಾತಿನಲ್ಲಿ ನಟಿಸುವ ಸಲುವಾಗಿ ಯುವರಾಜ್‌ ಸಿಂಗ್‌ ಮತ್ತು ಇರ್ಫಾನ್‌ ಪಠಾಣ್‌ ನನಗಿಂತ ಮೊದಲೇ ಅಲ್ಲಿ ಬಂದು ಕುಳಿತಿದ್ದರು. ಯುವಿ ಅವರ ಪಕ್ಕದಲ್ಲಿ ರಿತಿಕಾ ಸಜ್‌ ದೇ ಕುಳಿತಿದ್ದರು. ಯುವಿ ನನ್ನೊಂದಿಗೆ ಮಾತು ಆರಂಭಿಸುವ ಮುನ್ನವೇ ರಿತಿಕಾಳನ್ನು ತೋರಿಸಿ, ‘ಈಕೆ ನನ್ನ ತಂಗಿ ಸಮಾನ, ಈಕೆಯಿಂದ ದೂರ ಇರು’ ಎಂದು ಎಚ್ಚರಿಕೆ ನೀಡುವ ಧಾಟಿಯಲ್ಲಿ ಹೇಳಿದರು,” ಎಂದು ರೋಹಿತ್‌ ಹೇಳಿಕೊಂಡಿದ್ದಾರೆ.

ಆ ಸಂದರ್ಭದಲ್ಲಿ ರಿತಿಕಾ ಕ್ರೀಡಾ ನಿರ್ವಾಹಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಯುವಿ, ರೋಹಿತ್ ಮತ್ತು ಪಠಾಣ್ ಪಾಲ್ಗೊಂಡಿದ್ದ ಕಾರ್ಯಕ್ರಮವನ್ನು ಇದೇ ರಿತಿಕಾ ನಿರ್ವಹಿಸುತ್ತಿದ್ದರು.

ಅಚ್ಚರಿ ಎಂದರೆ ಇದೇ ರಿತಿಕಾ ಸಜ್ ದೇ ಅವರನ್ನೇ ರೋಹಿತ್ ವಿವಾಹವಾಗಿದ್ದು, ರಿತಿಕಾ ಅವರನ್ನು 2015ರ ಡಿಸೆಂಬರ್ 13ರಂದು ರೋಹಿತ್‌ ಮದುವೆಯಾದರು. ಕಳೆದ ಡಿ.13ರಂದು ಮೊಹಾಲಿಯಲ್ಲಿ ನಡೆದ ಪ್ರವಾಸಿ ಶ್ರೀಲಂಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭರ್ಜರಿ ದ್ವಿಶತಕ ಸಿಡಿಸುವ ಮೂಲಕ ಪತ್ನಿಗೆ ರೋಹಿತ್‌ ವಿವಾಹ ವಾರ್ಷಿಕೋತ್ಸವದ ಉಡುಗೊರೆ ನೀಡಿದ್ದರು. ಅಂದು ರಿತಿಕಾ ಆನಂದಭಾಷ್ಪದ ಮೂಲಕ ರೋಹಿತ್ ಶತಕವನ್ನು ಸಂಭ್ರಮಿಸಿದ್ದರು.

Comments are closed.