ಕ್ರೀಡೆ

ಕೊಹ್ಲಿ-ಅನುಷ್ಕಾ ಆರತಕ್ಷತೆಗೆ ಲಂಕಾದಿಂದ ಬಂದಿದ್ದ ವಿಶೇಷ ಅತಿಥಿ ಯಾರು ಗೊತ್ತಾ!

Pinterest LinkedIn Tumblr

ಮುಂಬೈ: ಇಟಲಿಯಲ್ಲಿ ಮದುವೆಯಾಗಿದ್ದ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ಮುಂಬೈನಲ್ಲಿ ಸಿನಿಮಾ ಕ್ಷೇತ್ರ ಹಾಗೂ ಕ್ರೀಡಾಕ್ಷೇತ್ರದ ಸ್ನೇಹಿತರಿಗಾಗಿ ವಿವಾಹ ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಿದ್ದು ಈ ಕಾರ್ಯಕ್ರಮಕ್ಕೆ ಲಂಕಾದ ವಿಶೇಷ ಅತಿಥಿಯೊಬ್ಬರು ಬಂದಿದ್ದರು.

ಶ್ರೀಲಂಕಾ ಕ್ರಿಕೆಟ್ ತಂಡದ ಪಕ್ಕಾ ಅಭಿಮಾನಿ ಗಯಾನ್ ಸೇನಾನಾಯಕೆ ಆರತಕ್ಷತೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ನವದಂಪತಿಗಳೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

ಸೇನನಾಯಕೆ ಅಂಗವಿಕಲರಾಗಿದ್ದು 2008ರ ಅಂಡರ್ 19 ವಿಶ್ವಕಪ್ ನಲ್ಲಿ ಮೊದಲ ಬಾರಿಗೆ ವಿರಾಟ್ ಕೊಹ್ಲಿಯನ್ನು ಭೇಟಿಯಾಗಿದ್ದರು. ಅಂದಿನಿಂದ ಲಂಕಾ ಪ್ರವಾಸಕೈಗೊಂಡಾಗಲೆಲ್ಲಾ ವಿರಾಟ್ ಕೊಹ್ಲಿ ಸೇನಾನಾಯಕೆ ಭೇಟಿಯಾಗುತ್ತಿದ್ದರು. ಈ ಸ್ನೇಹಕ್ಕೆ ಪೂರ್ವಕವಾಗಿ ಸ್ವತಃ ಕೊಹ್ಲಿ ಸೇನಾನಾಯಕೆಗೆ ಆರತಕ್ಷತೆಗೆ ಆಹ್ವಾನ ನೀಡಿದ್ದರು.

Comments are closed.