ಕ್ರೀಡೆ

ಫೈನಲಿನಲ್ಲಿ ದಿನೇಶ್ ಕಾರ್ತಿಕ್ ಗೂ ಮುನ್ನ ವಿಜಯ್ ಶಂಕರ್ ನ್ನು ಕಳಿಸಿದ್ದೇಕೆ? ನಾಯಕ ರೋಹಿತ್ ಶರ್ಮಾ ಹೇಳಿದ್ದೇನು?

Pinterest LinkedIn Tumblr

ಬಾಂಗ್ಲಾ ದೇಶದ ವಿರುದ್ಧ ರೋಚಕ ಗೆಲುವು ಸಾಧಿಸಿರುವ ಭಾರತ ನಿಡಹಾಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಸರಣಿಯ ಅಂತಿಮ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಗೇಮ್ ಪ್ಲ್ಯಾನ್ ಯಶಸ್ವಿಯಾಗಿದ್ದು, ಈ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ.

ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ದಿನೇಶ್ ಕಾರ್ತಿಕ್ ಗೂ ಮುನ್ನ ವಿಜಯ್ ಶಂಕರ್ ನ್ನು ಬ್ಯಾಟಿಂಗ್ ಗೆ ಕಳಿಸಿದ್ದರು. ಈ ಅಂಶ ಎಲ್ಲರ ಅಚ್ಚರಿಗೆ ಕಾರಣವಾಗಿತ್ತು. ದಿನೇಶ್ ಕಾರ್ತಿಕ್ ಗಿಂತಲೂ ಮುನ್ನ ವಿಜಯ್ ಶಂಕರ್ ನ್ನು ಏಕೆ ಕಳಿಸಿದರು ಎಂಬುದನ್ನು ಸ್ವತಃ ರೋಹಿತ್ ಶರ್ಮಾ ಬಹಿರಂಗಪಡಿಸಿದ್ದಾರೆ.

12 ಎಸೆತಗಳಿಗೆ 34 ರನ್ ಗಳು ಅಗತ್ಯವಿದ್ದಾಗ ಭಾರತ ಒತ್ತಡದಲ್ಲಿ ಸಿಲುಕಿತ್ತು. ಆದರೆ ರೋಹಿತ್ ಶರ್ಮಾ ಪ್ಲ್ಯಾನ್ ಯಶಸ್ವಿಯಾಗಿದ್ದು, ದಿನೇಶ್ ಕಾರ್ತಿಕ್ 6 ನೇ ಕ್ರಮಾಂಕದಲ್ಲಿ ಆಡಿದರೆ ಉತ್ತಮವಾಗಿರುತ್ತದೆ ಎಂಬುದನ್ನು ಅವರು ರಾಜ್ಯ ಮಟ್ಟದ ತಂಡಗಳಲ್ಲಿ ನಿರೂಪಿಸಿದ್ದಾರೆ. ಅಷ್ಟೇ ಅಲ್ಲದೇ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪರವಾಗಿ ನಮ್ಮೊಂದಿಗೆ ಆಡಿದಾಗ ಅವರ ಬ್ಯಾಟಿಂಗ್ ಸಾಮರ್ಥ್ಯ ನನಗೆ ತಿಳಿದಿತ್ತು. ಹೀಗಾಗಿ 5 ನೇ ಕ್ರಮಾಂಕದಿಂದ 6 ನೇ ಕ್ರಮಾಂಕಕ್ಕೆ ಬದಲಾವಣೆ ಮಾಡಲು ನಿರ್ಧರಿಸಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಗಳಿಸಿರುವ ದಿನೇಶ್ ಕಾರ್ತಿಕ್ 2 ಭರ್ಜರಿ ಸಿಕ್ಸರ್ ಗಳಿಸುವ ಮೂಲಕ ಒತ್ತಡದ ಸಂಡರ್ಭದಲ್ಲಿ ಭಾರತಕ್ಕೆ ಅಗತ್ಯವಿದ್ದ ಗೆಲುವಿನ ಅಂತರವನ್ನು ಕಡಿಮೆಗೊಳಿಸಿದ್ದರು. ದಿನೆಶ್ ಕಾರ್ತಿಕ್ ಪಂದ್ಯವನ್ನು ಗೆಲ್ಲಿಸುವ ಆಟ ಆಡಲಿದ್ದಾರೆ ಎಂಬ ವಿಶ್ವಾಸವಿತ್ತು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

Comments are closed.