ನವದೆಹಲಿ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡದ ನಾಯಕ ವಿರಾಟ್ ಕೊಹ್ಲಿ ಹೊಸ ಹೇರ್ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಐಪಿಎಲ್ ಗಾಗಿ ಹೊಸ ಕೇಶ ವಿನ್ಯಾಸದ ಫೋಟೋವನ್ನು ಕೊಹ್ಲಿ ತನ್ನ ಟ್ವೀಟರ್ ಖಾತೆಗೆ ಹಾಕಿದ್ದಾರೆ. ಸ್ಟೈಲ್ ಮಾಸ್ಟರ್ ಅಲಿಮ್ ಹಾಕಿಮ್ ಅವರ ಶ್ರೇಷ್ಠ ಕೇಶ ವಿನ್ಯಾಸವಿದು ಎಂಬ ಮಾತನ್ನು ಪ್ರಕಟಿಸಿದ್ದಾರೆ. ಇದಕ್ಕೆ ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.
ಆರ್ಸಿಬಿ ವಿರಾಟ್ ಕೊಹ್ಲಿಯನ್ನು ತಂಡದಲ್ಲೆ ಮುಂದುವರೆಸಿತ್ತು. ಇದಕ್ಕಾಗಿ ಕೊಹ್ಲಿಗೆ ಬರೋಬ್ಬರಿ 17 ಕೋಟಿ ರುಪಾಯಿ ನೀಡಿದೆ. ಏಪ್ರಿಲ್ 7ರಿಂದ ಐಪಿಎಲ್ ಮಹಾ ಸಮರ ಶುರುವಾಗಲಿದೆ.
Comments are closed.