ಕ್ರೀಡೆ

34 ಕೋಟಿಯ ಫ್ಲ್ಯಾಟ್ ಬೇಡವೆಂದ ಕೊಹ್ಲಿ

Pinterest LinkedIn Tumblr


ಮುಂಬಯಿ: ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಮುಂಬಯಿಯ ವರ್ಲಿ ಪ್ರದೇಶದಲ್ಲಿ ಸ್ಥಿತಗೊಂಡಿರುವ ಓಂಕಾರ್ 1973 ಟವರ್‌ನಲ್ಲಿ ಬುಕ್ಕಿಂಗ್ ಮಾಡಿರುವ ಸರಿ ಸುಮಾರು 34 ಕೋಟಿ ರೂ.ಗಳ ಫ್ಲ್ಯಾಟ್ ಒಪ್ಪಂದವನ್ನು ರದ್ದುಗೊಳಿಸಿದ್ದಾರೆ.

2016 ಜೂನ್ ತಿಂಗಳಲ್ಲಿ ಕೊಹ್ಲಿ ಅವರು ನಿರ್ಮಾಣ ಹಂತದ್ಲಲಿರುವ 7,171 ಚದರ ಅಡಿ ಸಮುದ್ರ ವೀಕ್ಷಣೆಯ ಅಪಾರ್ಟ್‌ಮೆಂಟ್‌ನ್ನು ಬರೋಬ್ಬರಿ 34 ಕೋಟಿ ರೂ.ಗಳಿಗೆ ಖರೀದಿಸಿದ್ದರು. ಈ ಸೂಪರ್-ಐಷಾರಾಮಿ ಫ್ಲ್ಯಾಟ್ ಯೋಜನೆಯನ್ನು ಓಂಕಾರ್ ರಿಯಾಲ್ಟರ್ಸ್ ಆ್ಯಂಡ್ ಡೆವಲಪರ್ಸ್ ಅಭಿವೃದ್ಧಿಗೊಳಿಸಿತ್ತು.

ಬಲ್ಲ ಮೂಲಗಳ ಪ್ರಕಾರ ಈ ಒಪ್ಪಂದವನ್ನು ರದ್ದುಗೊಳಿಸಿರುವ ಕೊಹ್ಲಿ ಇತ್ತೀಚೆಗೆ ಡಾ. ಅನ್ನಿ ಬೆಸೆಂಟ್ ರಸ್ತೆಯ ಸಮೀಪ ಸ್ಥಿತಗೊಂಡಿರುವ ರಹೇಜಾ ಗುಂಪಿನಿಂದ ಗನನಚುಂಬಿ ಕಟ್ಟಡದ ಒಂದು ಸಮುದ್ರ ನೋಟ ಅಪಾರ್ಟ್‌ಮೆಂಟ್‌ನ್ನು ಮಾಸಿಕ 15 ಲಕ್ಷ ರೂ.ಗಳ ಬಾಡಿಗೆಗೆ ಖರೀದಿಸಿದ್ದರು.

ರಹೇಜಾ ಲೆಜೆಂಡ್‌ನಲ್ಲಿ 40ನೇ ಮಹಡಿಯಲ್ಲಿರುವ ಈ ಫ್ಲ್ಯಾಟ್ 2,675.07 ಚದರ ಅಡಿಗಳ ಕಾರ್ಪೆಟ್ ಪ್ರದೇಶವನ್ನು ಹೊಂದಿದೆ.

ಅಂದ ಹಾಗೆ 2017 ಡಿಸೆಂಬರ್ 11ರಂದು ಇಟಲಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ಜತೆಗಿನ ವಿವಾಹ ನೆರವೇರಿತ್ತು.

Comments are closed.