ಕ್ರಿಕೆಟ್ ಪಂದ್ಯವೊಂದರಲ್ಲಿ ತಂಡದ ಎಲ್ಲ ಆಟಗಾರರಿಗೂ ಪಂದ್ಯ ಪುರುಷೋತ್ತಮ ಬಿರುದು ಸಿಕ್ಕ ಅಪರೂಪದ ಸಂದರ್ಭಗಳು ಈ ವರೆಗೆ ಘಟಿಸಿದ್ದು ಕೇವಲ ಮೂರು ಬಾರಿ ಮಾತ್ರ. ಇಂಥ ಸಾಧನೆ ಮೊದಲ ಬಾರಿಗೆ ನಡೆದಿದ್ದು 1996ರ ಏಪ್ರಿಲ್ 3ರಂದು. ಅಂದರೆ, ಇಂದಿಗೆ 22 ವರ್ಷಗಳ ಹಿಂದೆ. ಆ ಖ್ಯಾತಿಗೆ ಪಾತ್ರವಾದ ಮೊದಲ ತಂಡ ಟೀಂ ನ್ಯೂಜಿಲೆಂಡ್.
1996ರಲ್ಲಿ ಐದು ಏಕದಿನ ಸರಣಿಯ ಕ್ರಿಕೆಟ್ ಸರಣಿಗೆಂದು ವೆಸ್ಟ್ಇಂಡಿಸ್ ಪ್ರವಾಸ ಕೈಗೊಂಡಿದ್ದ ನ್ಯೂಜಿಲೆಂಡ್ ಮೂರು ಪಂದ್ಯಗಳನ್ನಾಡಿ 2-1ರ ಹಿನ್ನಡೆ ಅನುಭವಿಸಿತ್ತು. ಸರಣಿಯನ್ನು ಜೀವಂತವಾಗಿಡಬೇಕಿದ್ದರೆ ನಾಲ್ಕನೇ ಪಂದ್ಯವನ್ನು ಗೆಲ್ಲಲೇ ಬೇಕಿದ್ದ ಅನಿವಾಯರ್ತೆಯಲ್ಲಿತ್ತು ನ್ಯೂಜಿಲೆಂಡ್. ಈ ಸವಾಲಿನಲ್ಲೇ ಬ್ಯಾಟಿಂಗ್ಗೆ ಇಳಿದ ನ್ಯೂಜಿಲೆಂಡ್ ತಂಡ 36 ಒವರ್ಗಳಲ್ಲಿ 158ರನ್ ಗಳಿಸಿ ಸರ್ವ ಪತನ ಕಂಡಿತ್ತು.
ಆದರೆ, ವೆಸ್ಟ್ಇಂಡಿಸ್ ತಂಡಕ್ಕೆ ಬೌಲ್ ಮಾಡಲು ಇಳಿದ ನ್ಯೂಜಿಲೆಂಡ್ ಬೌಲಿಂಗ್ನಲ್ಲಿ ಪಾರಮ್ಯ ಮರೆದಿತ್ತು. ನ್ಯೂಜಿಲೆಂಡ್ ತಂಡ ಬ್ಯಾಟಿಂಗ್ನಲ್ಲಿ ವೈಫಲ್ಯ ಅನುಭವಿಸಿತ್ತಾದರೂ, ಮೊನಚು ಬೌಲಿಂಗ್ ದಾಳಿ ನಡೆಸಿ ವೆಸ್ಟ್ ಇಂಡಿಸ್ ತಂಡವನ್ನು 154 ರನ್ಗಳಿಗೆ ಕಟ್ಟಿ ಹಾಕಿತ್ತು. 49.1 ಓವರ್ಗಳಲ್ಲಿ ವೆಸ್ಟ್ ಇಂಡಿಸ್ ತಂಡ ಸರ್ವ ಪತನ ಕಂಡಿತ್ತು.
ಈ ಪಂದ್ಯದಲ್ಲಿ ಒಬ್ಬರಿಗಷ್ಟೇ ಪಂದ್ಯ ಪುರಷೋತ್ತಮ ಪ್ರಶಸ್ತಿ ನೀಡದಿರಲು ನಿರ್ಧರಿಸಿದ ಸಂಘಟಕರು, ನ್ಯೂಜಿಲೆಂಡ್ ತಂಡದ ಎಲ್ಲ ಸದಸ್ಯರಿಗೂ ಪ್ರಶಸ್ತಿ ನೀಡಿ ಗೌರವಿಸಿತು.
ಇನ್ನು ತಂಡದ ಎಲ್ಲ ಸದಸ್ಯರಿಗೂ ಪಂದ್ಯ ಪುರುಷೋತ್ತಮ ಪ್ರಶಸ್ತಿ ನೀಡಬೇಕಾದ ಸನ್ನಿವೇಶ ಟೆಸ್ಟ್ ಕ್ರಿಕೆಟ್ನಲ್ಲೂ ಎರಡು ಬಾರಿ ಎದುರಾಗಿದೆ. ಆದರೆ ಮೊದಲು ನಡೆದಿದ್ದು ಮಾತ್ರ ಏಕ ದಿನ ಕ್ರಿಕೆಟ್ನಲ್ಲಿ ಅದೂ ಇಂದಿಗೆ 22 ವರ್ಷಗಳ ಹಿಂದೆ ಎಂಬುದು ವಿಶೇಷ.
Comments are closed.