ಕ್ರೀಡೆ

ಮುಂಬೈ ಇಂಡಿಯನ್ಸ್ ವಿರುದ್ಧ 1 ವಿಕೆಟ್ ರೋಚಕ ಗೆಲುವು ಪಡೆದ ಹೈದರಾಬಾದ್

Pinterest LinkedIn Tumblr

ಹೈದರಾಬಾದ್: 11ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಸರಣಿ ಇಂದಿನ ಪಂದ್ಯದಲ್ಲಿ ಮುಂಬಯಿ ಇಂಡಿಯನ್ಸ್‌ ವಿರುದ್ಧ ಸನ್‌ರೈಸರ್ಸ್‌ ಹೈದರಾಬಾದ್‌ 1 ವಿಕೆಟ್ ಗಳ ಜಯ ಸಾಧಿಸಿದೆ.

ಶಿಖರ್ ಧವನ್(45), ದೀಪಕ್ ಹೂಡಾ (32) ಉತ್ತಮ ರನ್ ಗಳಿಕೆಯೊಡನೆ ಹೈದರಾಬಾದ್ ತಂಡವು 148 ರನ್ ಗಳ ಗುರಿ ಸಾಧಿಸಿ ಜಯದ ಮಾಲೆ ಧರಿಸಿತು.

ಪ್ರಾರಂಭದಲ್ಲಿ ಬ್ಯಾಟಿಂಗ್ ನಡೆಸಿದ್ದ ಹಾಲಿ ಚಾಂಪಿಯನ್ಸ್‌ ಮುಂಬಯಿ ಇಂಡಿಯನ್ಸ್‌ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 147 ರನ್ ಕಲೆ ಹಾಕಿತ್ತು.

ಮುಂಬೈ ಪರವಾಗಿ ಎವಿನ್ ಲೂವಿಸ್ (29), ಕೀರಾನ್ ಪೊಲಾರ್ಡ್, ಸೂರ್ಯಕುಮಾರ್ ಇಬ್ಬರು ತಲಾ 28ರನ್ ಕಲೆಹಾಕಿದ್ದು ಬಿಟ್ಟರೆ ಇನ್ನಾರೂ ಉತ್ತಮ ಪ್ರದರ್ಶನ ತೋರಲಿಲ್ಲ.

ಹೈದಾರಾಬಾದ್ ಪರ ಸಂದೀಪ್ ಶರ್ಮಾ, ಬಿಲ್ಲಿ ಸ್ಟಾನ್‌ಲೇಕ್ ಹಾಗೂ ಸಿದ್ದಾರ್ಥ್ ಕೌಲ್ ತಲಾ 2 ಮತ್ತು ರಾಶೀದ್ ಖಾನ್ ಮತ್ತು ಶಕಿಬ್ ಅಲ್ ಹಸನ್ ತಲಾ 1 ವಿಕೆಟ್ ಪಡೆದಿದ್ದರು.

ಹೀಗೆ ಬ್ಯಾಟಿಂಗ್ ವೈಫಲ್ಯ ಕಂಡ ಮುಂಬೈ ತಂಡ ನೀಡಿದ್ದ 148 ರನ್ ಗುರಿ ಬೆನ್ನತ್ತಿದ ಹೈದರಾಬಾದ್ ಉತ್ತಮ ಪ್ರಾರಂಭ ಕಂಡಿತ್ತು. ಶಿಖರ್ ಧವನ್, ವೃದ್ಧಿಮಾನ್‌ ಸಾಹ ಉತ್ತಮ ಜತೆಯಾಟ ನಿಡಿದ್ದರು.

ಆದರೆ ಪಂದ್ಯದ ಮದ್ಯಂತರದಲ್ಲಿ ನಾಯಕ ಕೇನ್ ವಿಲಿಯಮ್ಸನ್ (6), ಮನೀಷ್ ಪಾಂಡೆ (11) ಹಾಗೂ ಶಕಿಬ್ ಅಲ್ ಹಸನ್ (12) ವಿಕೆಟ್ ಉರುಳುವುದರೊಡನೆ ಮುಂಬೈ ತಂಡಕ್ಕೆ ಗೆಲುವಿನ ನಿರೀಕ್ಷೆ ಮೂಡಿದಂತಾಗಿತ್ತು.

ಆದರೆ ಮತ್ತೆ ಚೇತರಿಕೆ ಕಂಡುಕೊಂಡ ಹೈದರಾಬಾದ್ ತಂಡಕ್ಕೆ ಗೆಲುವಿಗಾಗಿ ಕಡೆಯ ಎರಡು ಓವರ್ ಗಳಲ್ಲಿ 12 ರನ್ ಅಗತ್ಯವಿತ್ತು.

ಇಷ್ಟರಲ್ಲಿ ಮುಂಬೈ ಸಹ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದು 19ನೇ ಓವರ್‌ನಲ್ಲಿ 1 ರನ್ ಮಾತ್ರ ನೀಡಿ ಮುಸ್ತಾಫಿಜುರ್ 2 ವಿಕೆಟ್ ಕಬಳಿಸಿದ್ದರು.

ಅಂತಿಮ ಓವರ್‌ನಲ್ಲಿ ಹೈದರಾಬಾದ್ ನಲ್ಲಿ ಒಂದು ವಿಕೆಟ್ ಅಷ್ಟೇ ಉಳಿದಿದ್ದು ಗೆಲ್ಲಲು11 ರನ್ ಅಗತ್ಯವಾಗಿತ್ತು. ಆದರೆ ದೀಪಕ್ ಹೂಡಾ, ಬಿಲ್ಲಿ ಸ್ಟಾನ್‌ಲೇಕ್ ಅವರ ಜತೆಯಾತ ಫಲನೀಡಿದ್ದು ಹೈದರಾಬಾದ್ ತಂಡ ವಿಜಯಿಯಾಗಿದೆ.

ಮುಂಬಯಿ ಪರ ಮಾರ್ಕಂಡೆ 4 ಮುಸ್ತಾಫಿಜುರ್ 3 ಹಾಗೂ ಬುಮ್ರಾ 2 ವಿಕೆಟ್ ಗಳಿಸಿದ್ದರು

Comments are closed.