ನವದೆಹಲಿ: ವಾಘಾ ಗಡಿಯಲ್ಲಿ ಧ್ವಜ ಅವರೋಹಣ ಸಮಾರಂಭದ ವೇಳೆ ಭಾರತೀಯ ಯೋಧರನ್ನು ಹಾಸ್ಯ ಮಾಡಿ ಪಾಕ್ ಪೇಸ್ ಬೌಲರ್ ಹಸನ್ ಅಲಿ ವಿವಾದಕ್ಕೀಡಾಗಿದ್ದಾರೆ.
Hasan Ali being Hasan Ali during the flag-lowering ceremony at the Wagah border pic.twitter.com/sQuiwthVLb
— ESPNcricinfo (@ESPNcricinfo) April 21, 2018
ಸಮಾರಂಭ ನೋಡಲು ಬಂದಿದ್ದ ಹಸನ್ ಕುಳಿತಲ್ಲಿಂದ ಎದ್ದು ಬಂದು ಯೋಧರನ್ನು ಅನುಕರಿಸಿ ತಮಾಷೆ ಮಾಡಿದ್ದಾರೆ. ಅನಂತರ ಸೊಂಟಕ್ಕೆ ಕೈಯಿಟ್ಟು ಮಂಗನಾಟ ಮಾಡಿ, ಮುಷ್ಠಿ ಬಿಗಿದು, ತೊಡೆ ತಟ್ಟಿ ದರ್ಪ ತೋರಿಸುತ್ತಿರುವುದು ವಿಡಿಯೊದಲ್ಲಿದೆ.
ಹಸನ್ ಅಲಿ ಈ ಚೇಷ್ಟೆ ವಿಡಿಯೊ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದ್ದು, ಹಸನ್ ಅಲಿ ವಿರುದ್ಧ ಟೀಕೆಗಳು ವ್ಯಕ್ತವಾಗಿವೆ.
ಹಸನ್ ಅಲಿ ಈ ರೀತಿ ಮಾಡಿದ್ದು ಸರಿಯಲ್ಲ, ಸೈನಿಕರನ್ನು ಆತ ಅವಮಾನಿಸುತ್ತಿದ್ದರೂ ಆತನನ್ನು ಯಾರೂ ತಡೆದಿಲ್ಲ. 40 ಸೆಕೆಂಡ್‍ಗಳ ಕಾಲ ಪಾಕಿಸ್ತಾನ್ ಜಿಂದಾಬಾದ್, ಜೀಯೇ ಜೀಯೇ ಪಾಕಿಸ್ತಾನ್ ಎಂಬ ಘೋಷಣೆಯನ್ನು ಕೂಗಿಕೊಂಡು ಈತ ಚೇಷ್ಟೆ ಮಾಡಿದ್ದಾನೆ ಎಂದು ನೆಟಿಜನ್‍ಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಯೋಧರು ಮಾತ್ರ ಭಾಗವಹಿಸುವ ಈ ಸಮಾರಂಭದಲ್ಲಿ ಈತ ಮಾಡಿದ ಚೇಷ್ಟೆ ಆ ಸಮಾರಂಭದ ಮಹತ್ವಕ್ಕೆ ಧಕ್ಕೆ ತಂದಿದೆ. ಇದರ ವಿರುದ್ಧ ಪಾಕಿಸ್ತಾನಕ್ಕೆ ನಮ್ಮ ಪ್ರತಿಭಟನೆಯನ್ನು ಸೂಚಿಸಿರುವುದಾಗಿ ಬಿಎಸ್‍ಎಫ್ ಇನ್ಸ್ ಪೆಕ್ಟರ್ ಜನರಲ್ ಮುಕುಲ್ ಗೋಯಲ್ ಹೇಳಿದ್ದಾರೆ.
ಹಸನ್ ಅಲಿ ಜತೆ ಇತರ ಪಾಕ್ ಕ್ರಿಕೆಟಿಗರ ತಂಡ ಧ್ವಜ ಅವರೋಹಣ ಸಮಾರಂಭ ಕಾಣಲು ಅಲ್ಲಿಗೆ ಬಂದಿತ್ತು. ಈ ಘಟನೆ ನಂತರ ಪಾಕಿಸ್ತಾನ್ ಎಂದಿಗೂ ಚಂದ್ರನಂತೆ ಎತ್ತರದಲ್ಲೇ ನಿಲ್ಲಲಿ ಎಂದು ಹಸನ್ ಅಲಿ ಟ್ವೀಟ್ ಮಾಡಿದ್ದಾರೆ.
Comments are closed.