ಬೆಂಗಳೂರು: ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಆಟದಷ್ಟೇ ತಮ್ಮ ಫಿಟ್ ನೆಸ್ ನಿಂದಾಗಿಯೂ ಖ್ಯಾತಿ ಗಳಿಸಿದವರು. ವಿಕೆಟ್ ನಡುವೆ ಪಾದರಸದಂತೆ ಓಡುವ ಕೊಹ್ಲಿ ಇದೀಗ ಅದೇ ಸ್ಪರ್ಧೆಗೆ ಸಂಬಂಧಿಸಿದಂತೆ ಸಹ ಆಟಗಾರ ಮನ್ ದೀಪ್ ಗೆ ಹೊಸ ಸವಾಲನ್ನು ನೀಡಿದ್ದಾರೆ.
ಹೌದು… ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರೂ ಕೂಡ ಆಗಿರುವ ವಿರಾಟ್ ಕೊಹ್ಲಿ ಇದೀಗ 3 ರನ್‌ಗಳನ್ನು ಕೇವಲ 8.90 ಸೆಕೆಂಡ್‌ಗಳಲ್ಲಿ ಪೂರೈಸಿ, ಇದನ್ನು ಮುರಿಯುವಂತೆ ಆರ್‌ಸಿಬಿಯ ಸಹ ಆಟಗಾರ ಮನ್ ದೀಪ್ ಸಿಂಗ್‌ಗೆ ಸವಾಲು ಹಾಕಿದ್ದಾರೆ.
3.01 ಸೆ.ಗಳಲ್ಲಿ ಮೊದಲ ರನ್, 3.10 ಸೆ.ಗಳಲ್ಲಿ 2ನೇ ರನ್ ಹಾಗೂ 2.79 ಸೆ.ಗಳಲ್ಲಿ 3ನೇ ರನ್ ಸೇರಿದಂತೆ 8.90 ಸೆಕೆಂಡ್‌ಗಳಲ್ಲಿ 3 ರನ್ ಗಳನ್ನು ಪೂರ್ತಿಗೊಳಿಸಿರುವ ವಿಡಿಯೊವನ್ನು ಕೊಹ್ಲಿ ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ. ಅಲ್ಲದೆ ಈ ಸಮಯವನ್ನು ಮುರಿಯುವಂತೆ ಮನ್ ದೀಪ್ ಗೆ ಸವಾಲು ಹಾಕಿದ್ದಾರೆ.
‘ನೀನು ನನಗಿಂತ ವೇಗವಾಗಿ ಓಡಬಹುದೆಂದು ಭಾವಿಸುತ್ತೇನೆ. ನನ್ನ 3 ರನ್‌ಗಳ ವೇಗದ ಸಮಯ ಇಲ್ಲಿದೆ. ನಿನ್ನ ವೇಗದ ಮೂರು ರನ್‌ಗಳ ವಿಡಿಯೊವನ್ನು ಕಳುಹಿಸಿ. ಮನ್ ದೀಪ್ ಸಿಂಗ್, ನೀನು 8.90 ಸೆ.ಗಳನ್ನು ಮೀರಿಸುತ್ತೀಯಾ ನೋಡೋಣ,” ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.
Comments are closed.