ಕ್ರೀಡೆ

ಸಾಮಾನ್ಯ ವ್ಯಕ್ತಿಯಂತೆ ಕುಳಿತು ಐಪಿಎಲ್ ಪಂದ್ಯ ವೀಕ್ಷಿಸಿದ ದ್ರಾವಿಡ್- ವಿಡಿಯೋ ವೈರಲ್!

Pinterest LinkedIn Tumblr

ಬೆಂಗಳೂರು: ಭಾರತ ತಂಡದ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಭಾನುವಾರ ನಡೆದ ಆರ್‌ಸಿಬಿ-ಕೆಕೆಆರ್ ಪಂದ್ಯವನ್ನು ಸಾಮಾನ್ಯ ವ್ಯಕ್ತಿಯಂತೆ ಕುಳಿತು ವೀಕ್ಷಿಸಿದ್ದಾರೆ.

ಭಾನುವಾರ ಆರ್‌ಸಿಬಿಯನ್ನು ಬೆಂಬಲಿಸೋಕ್ಕೆ ರಾಹುಲ್ ದ್ರಾವಿಡ್ ಚಿನ್ನಸ್ವಾಮಿ ಸ್ಟೇಡಿಯಂಗೆ ಬಂದಿದ್ದರು. ಆದರೆ ಅವರನ್ನು ಅಲ್ಲಿ ನೋಡಿ ಅಭಿಮಾನಿಗಳು ಆಶ್ಚರ್ಯಪಟ್ಟರು. ದ್ರಾವಿಡ್ ವಿಐಪಿ ಬಾಕ್ಸ್ ನಲ್ಲಿ ಕುಳಿತುಕೊಳ್ಳದೇ ಅಭಿಮಾನಿಗಳ ನಡುವೆ ಸಾಮಾನ್ಯ ಜನರಂತೆ ಕುಳಿತುಕೊಂಡಿದ್ದರು.

ದ್ರಾವಿಡ್ ಕುಳಿತುಕೊಂಡಿದ್ದ ವಿಡಿಯೋವನ್ನು ಐಪಿಎಲ್ ತನ್ನ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಿದೆ. “ಆರ್‌ಸಿಬಿಯನ್ನು ಬೆಂಬಲಿಸಲು ಯಾರು ಬಂದಿದ್ದಾರೆ ನೋಡಿ. ದಿ-ವಾಲ್, ದಿ ಲೆಜೆಂಡ್, ರಾಹುಲ್ ದ್ರಾವಿಡ್” ಎಂದು ಟ್ವೀಟ್ ನಲ್ಲಿ ಬರೆಯಲಾಗಿದೆ.

ಈ ವಿಡಿಯೋ ಈಗ ಸಾಕಷ್ಟು ವೈರಲ್ ಆಗಿದ್ದು, ರಾಹುಲ್ ದ್ರಾವಿಡ್ ಅವರನ್ನು ನೋಡಿ ಅಭಿಮಾನಿಗಳು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಹುಲ್ ದ್ರಾವಿಡ್ ಅವರನ್ನು ಆರ್‌ಸಿಬಿ ಕೋಚ್ ಮಾಡಿ ಎಂದು ಕೆಲವು ಅಭಿಮಾನಿಗಳು ಮನವಿ ಮಾಡಿಕೊಂಡಿದ್ದಾರೆ.

ಇನ್ನೂ ಕೆಲವರು ದ್ರಾವಿಡ್ ಕ್ರಿಕೆಟ್‍ನಲ್ಲಿ ಮಾತ್ರ ನನ್ನ ರೋಲ್ ಮಾಡಲ್ ಅಲ್ಲ, ನನ್ನ ಬದುಕಿನಲ್ಲೂ ಅವರು ನನ್ನ ರೋಲ್ ಮಾಡಲ್ ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ. ಹೀಗೆ ಮತ್ತೊಬ್ಬರು ನಿಮಗಾಗಿ ನಾನು ಆರ್‌ಸಿಬಿ ತಂಡವನ್ನು ಬೆಂಬಲಿಸುತ್ತಿದ್ದಿನಿ ಎಂದು ಅಭಿಮಾನಿಗಳು ಟ್ವಿಟ್ಟರ್ ಮೂಲಕ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಸದ್ಯ ಭಾರತ ಕಿರಿಯರ ತಂಡ ಕೋಚ್ ಆಗಿರುವ ದ್ರಾವಿಡ್ ಕಾರ್ಯಕ್ರಮಗಳಿಗೆ ಸಾಮಾನ್ಯ ವ್ಯಕ್ತಿಯಂತೆ ಹೋಗುವುದು ಇದೇ ಮೊದಲೆನಲ್ಲ. 2017ರಲ್ಲಿ ವಿಜ್ಞಾನ ವಸ್ತು ಪ್ರದರ್ಶನ ವೀಕ್ಷಿಸಲು ತೆರಳಿದ್ದರು. ಈ ವೇಳೆ ಸಾಮಾನ್ಯ ವ್ಯಕ್ತಿಯಂತೆ ಸರದಿಯಲ್ಲಿ ನಿಂತುಕೊಂಡಿದ್ದರು.

Comments are closed.