ಕ್ರೀಡೆ

ರಾಜಸ್ತಾನ ವಿರುದ್ಧ 4 ರನ್ ಗಳಿಂದ ರೋಚಕ ಗೆಲುವು ಸಾಧಿಸಿದ ಡೆಲ್ಲಿ ಡೇರ್ ಡೆವಿಲ್ಸ್

Pinterest LinkedIn Tumblr

ನವದೆಹಲಿ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಯಲ್ಲಿ ರಾಜಸ್ತಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ 4 ರನ್ ಗಳಿಂದ ರೋಚಕ ಗೆಲುವು ಸಾಧಿಸಿದೆ.

ದೆಹಲಿಯ ಫಿರೋಜ್ ಶಾ ಕೊಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಮಳೆಯ ಕಾರಣ 17.1 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 196 ರನ್ ಗಳನ್ನು ಪೇರಿಸಿತು.

ಮಳೆಯಿಂದಾಗಿ ರಾಜಸ್ತಾನ ತಂಡಕ್ಕೆ ಡಕ್ವರ್ತ್ ಲೂಯಿಸ್ ನಿಯಮದಡಿ 12 ಓವರ್ ಗಳಲ್ಲಿ 151 ರನ್ ಗಳ ಗುರಿ ನೀಡಲಾಯಿತು. ರಾಜಸ್ತಾನ ಪರ ಜೋಸ್ ಬಟ್ಲರ್ ಭರ್ಜರಿ ಬ್ಯಾಟಿಂಗ್ ನಿಂದಾಗಿ ತಂಡ ಗೆಲುವು ಸಾಧಿಸಲಿತ್ತು. ಆದರೆ ಬಟ್ಲರ್ ಔಟಾಗಿದ್ದು ತಂಡ ಸೋಲು ಕಂಡಿದೆ.

ಡೆಲ್ಲಿ ಡೇರ್ ಡೆವಿಲ್ಸ್ ಪರ ಪೃಥ್ವಿ ಶಾ 47, ಶ್ರೇಯಸ್ ಅಯ್ಯರ್ 50, ರಿಷಬ್ ಪಂತ್ 69 ರನ್ ಸಿಡಿಸಿದ್ದಾರೆ.

ರಾಜಸ್ತಾನ ರಾಯಲ್ಸ್ ಪರ ಶೋರ್ಟ್ 44, ಜೋಸ್ ಬಟ್ಲರ್ 67 ಮತ್ತು ಗೌತಮ್ 18 ರನ್ ಬಾರಿಸಿದ್ದಾರೆ.

Comments are closed.