ಕ್ರೀಡೆ

ಮುಂದಿರುವ ಎಲ್ಲ ಪಂದ್ಯಗಳನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿ ಕೊಹ್ಲಿ ಪಡೆ ! ಒಂದರಲ್ಲೂ ಸೋತರು ಮನೆಗೆ …

Pinterest LinkedIn Tumblr

ಬೆಂಗಳೂರು: ನಿರ್ಣಾಯಕ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಹೀನಾಯವಾಗಿ ಸೋಲುವ ಮೂಲಕ ಬಹುತೇಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟೂರ್ನಿಯಿಂದ ನಿರ್ಗಮನದ ಹೊಸ್ತಿಲಲ್ಲಿ ಬಂದು ನಿಂತಿದೆ. ತನ್ನ ಮುಂದಿರುವ ಎಲ್ಲಾ ಪಂದ್ಯಗಳನ್ನೂ ಆರ್ ಸಿಬಿ ಗೆದ್ದರಷ್ಟೇ ಟೂರ್ನಿಯಲ್ಲಿ ಅದು ಜೀವಂತ..

ಹೌದು.. ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಪಂದ್ಯದ ಸೋಲು ಆರ್ ಸಿಬಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು, ಟೂರ್ನಿಯಲ್ಲಿ ಮುಂದುವರೆಯಬೇಕಾದರೆ ಶತಾಯಗತಾಯ ತನ್ನ ಮುಂದಿರುವ ಎಲ್ಲಾ ಪಂದ್ಯಗಳನ್ನೂ ಕೊಹ್ಲಿ ಪಡೆ ಗೆಲ್ಲಲೇಬೇಕಿದೆ. ಪ್ರಸ್ತುತ ಆರ್ ಸಿಬಿ ತಂಡ 9 ಪಂದ್ಯಗಳಿಂದ 6 ಅಂಕಗಳಿಸಿದ್ದು, ಇಷ್ಟೇ ಅಂಕಗಳ ಗಳಿಸಿರುವ ತಂಡಗಳ ಪಟ್ಟಿಯಲ್ಲಿ ಆರ್ ಸಿಬಿ ಅಗ್ರ ಸ್ಥಾನದಲ್ಲಿದೆ. ಆರ್ ಸಿಬಿಯ ನೆಟ್ ರನ್ ರೇಟ್ ಆರ್ ಸಿಬಿಗೆ ಇದೀಗ ಆಮ್ಲಜನಕವಾಗಿದ್ದು, ತನ್ನ ಮುಂದಿರುವ ಬಾಕಿ ಐದು ಪಂದ್ಯಗಳನ್ನು ಆರ್ ಸಿಬಿ ಗೆಲ್ಲಲೇ ಬೇಕಿದೆ.

ಆರ್ ಸಿಬಿ ತನ್ನ ಮುಂದಿನ ಐದು ಪಂದ್ಯಗಳಲ್ಲಿ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಸನ್ ರೈಸರ್ಸ್ ಹೈದರಬಾದ್ ತಂಡವನ್ನು ಎರಡು ಬಾರಿ ಎದುರಿಸಲಿದ್ದು, ಉಳಿದಂತೆ ಕಿಂಗ್ಸ್ ಇಲೆವನ್ ಪಂಜಾಬ್, ಡೆಲ್ಲಿ ಡೇರ್ ಡೆವಿಲ್ಸ್, ರಾಜಸ್ಥಾನ ರಾಯಲ್ಸ್ ತಂಡಗಳ ವಿರುದ್ಧ ಯಾವುದೇ ಕಾರಣಕ್ಕೂ ಗೆಲ್ಲಲೇಬೇಕಿದೆ. ಆಗ ತಂಡ ಒಟ್ಟಾರೆ ಅಂಕ ಏರಿಕೆಯಾಗಿ ಆರ್ ಸಿಬಿ ಸೆಮಿಫೈನಲ್ ಹಂತಕ್ಕೇರುವ ಸಾಧ್ಯತೆ.

ಒಂದು ವೇಳೆ ಆರ್ ಸಿಬಿ ಈ ಐದು ಪಂದ್ಯಗಳಲ್ಲಿ ಯಾವುದೇ ಒಂದು ಪಂದ್ಯ ಸೋತರೂ ಅದು ಟೂರ್ನಿಯಿಂದ ಹೊರ ಬೀಳುವುದು ನಿಶ್ಚಿತವಾಗುತ್ತದೆ.

Comments are closed.