ಕೋಲ್ಕತ್ತಾ: ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ರಾಜಾಸ್ಥಾನ-ಕೋಲ್ಕತ್ತಾ ನಡುವಿನ ಹೋರಾಟದಲ್ಲಿ ಕೋಲ್ಕೊತಾ ನೈಟ್ ರೈಡರ್ಸ್ ರಾಜಸ್ಥಾನ ರಾಯಲ್ಸ್ ವಿರುದ್ಧ 6 ವಿಕೆಟ್ ಗಳ ಜಯ ಗಳಿಸಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದ ಕೋಲ್ಕತ್ತಾ ನಾಯಕ ದಿನೇಶ್ ಕಾರ್ತಿಕ್ ಮತ್ತು ತಂಡ ಎದುರಾಳಿ ತಂಡ ರಾಅಸ್ಥಾನಕ್ಕೆ ಮೊದಲು ಬ್ಯಾಟಿಂಗ್ ಅವಕಾಶ ನಿಡಿತ್ತು.
ರಾಜಸ್ಥಾನವು ಆಡಿದ 19 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 142 ರನ್ ಗಳಿಸಿತ್ತು.
ರಾಜಸ್ಥಾನ ತಂಡದ ಪರವಾಗಿ ಜೋಸ್ ಬಟ್ಲರ್ 39 ರನ್ ಪೇರಿಸಿದ್ದೇ ಅವರ ಗರಿಷ್ಠ ರನ್ ಗಳಿಕೆಯಾಗಿತ್ತು. ಇದೇ ವೇಳೆ ಕೋಲ್ಕತ್ತಾ ಪರವಾಗಿ ಕುಲದೀಪ್ ಯಾದವ್ 4 ವಿಕೆಟ್ ಕಿತ್ತು ತಮ್ಮ ಅಮೋಘ ಪ್ರತಿಭೆ ಮೆರೆದಿದ್ದರು.
ಇದಾಗಿ ಎದುರಾಳಿಗಳಿಂದ 143ರ ಸಾಧಾರಣ ಮೊತ್ತದ ಟಾರ್ಗೆಟ್ ಪಡೆದ ಕೋಲ್ಕತ್ತಾ 18 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 145 ರನ್ ಗಳಿಸುವದರೊಡನೆ ಗುರಿ ತಲುಪಿತು.
ಕೋಲ್ಕತ್ತಾ ಪರವಾಗಿ ಕ್ರಿಸ್ ಲಿನ್ನ್ 45, ದಿನೇಶ್ ಕಾರ್ತಿಉಕ್ 41, ನಿತೀಶ್ ರಾಣಾ 21, ಸುನೀಲ್ ನರೀನೆ 21 ರನ್ ಕಲೆಹಾಕಿ ತಂಡಕ್ಕೆ ಉತ್ತಮ ಮುನ್ನಡೆ ದೊರಕಿಸುವಲ್ಲಿ ಸಫಲರಾದರು.
ಇನ್ನು ರಾಜಸ್ಥಾನ ಪರವಾಗಿ ಬೆನ್ ಸ್ಟೋಕ್ಸ್ 3 ಹಾಗೂ ಇಶ್ ಸೋಧಿ 1 ವಿಕೆಟ್ ಗಳಿಸಿದರು.
Comments are closed.