ಕ್ರೀಡೆ

ಐಪಿಎಲ್’ನಲ್ಲಿ ಮಿಂಚುತ್ತಿರುವ ಕ್ರಿಕೆಟಿಗ ರಶೀದ್ ಖಾನ್’ನನ್ನು ನಾವು ಎಂದಿಗೂ ಬಿಟ್ಟುಕೊಡಲ್ಲ ಎಂದು ಮೋದಿಗೆ ಟ್ವೀಟ್ ಮಾಡಿದ ಗಿಲಾನಿ

Pinterest LinkedIn Tumblr

ನವದೆಹಲಿ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಆಡುತ್ತಿರುವ ಆಫ್ಘಾನಿಸ್ತಾನ ತಂಡದ ಆಟಗಾರ ರಶೀದ್ ಖಾನ್ ಉತ್ತಮ ಪ್ರದರ್ಶನ ನೀಡುತ್ತಿದ್ದು ಭಾರತೀಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇನ್ನು ಕೆಲವರು ಒಂದು ಹೆಜ್ಜೆ ಮುಂದಕ್ಕೆ ಹೋಗಿ ರಶೀದ್ ಖಾನ್ ನನ್ನು ಶಾಶ್ವತವಾಗಿ ಭಾರತಕ್ಕೆ ಕಳುಹಿಸಿಬಿಡಿ ಎಂಬ ಟ್ವೀಟ್ ಗಳನ್ನು ಮಾಡುತ್ತಿದ್ದರು. ಇದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ ಆಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಗಿಲಾನಿ ಐಪಿಎಲ್ ನಲ್ಲಿನ ರಶೀದ್ ಖಾನ್ ಪ್ರದರ್ಶನವನ್ನು ಕೊಂಡಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ಮಾಡಿರುವ ಗಿಲಾನಿ ನಾವು ರಶೀದ್ ಖಾನ್ ನನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ ಎಂದು ಟ್ವೀಟಿಸಿದ್ದಾರೆ.

ಐಪಿಎಲ್ ನಲ್ಲಿನ ರಶೀದ್ ಖಾನ್ ಸಾಧನೆಗೆ ಆಫ್ಘಾನಿಗರು ಹೆಮ್ಮೆ ಪಡುತ್ತಾರೆ. ನಮ್ಮ ಆಟಗಾರರಿಗೆ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ವೇದಿಕೆಯನ್ನು ಕಲ್ಪಿಸಿದ ಭಾರತೀಯರಿಗೆ ನಾನ್ನ ಧನ್ಯವಾದಗಳು. ಆಫ್ಘಾನ್ ಏನು ಎಂಬುದನ್ನು ರಶೀದ್ ಖಾನ್ ನಿರೂಪಿಸಿದ್ದಾರೆ. ಅವರು ಕ್ರಿಕೆಟ್ ಜಗತ್ತಿಗೆ ಒಂದು ಆಸ್ತಿಯಾಗಿ ಉಳಿದಿದ್ದಾರೆ. ನಾವು ಅವನನ್ನು ಬಿಟ್ಟುಕೊಡುವುದಿಲ್ಲ ಎಂದು ನರೇಂದ್ರ ಮೋದಿ ಅವರಿಗೆ ಟ್ವೀಟ್ ಮಾಡಿದ್ದಾರೆ.

ನಿನ್ನೆ ನಡೆದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಕೋಲ್ಕತ್ತಾ ವಿರುದ್ಧ ಗೆಲುವು ಸಾಧಿಸಲು ರಶೀದ್ ಖಾನ್ ಪ್ರಮುಖ ಕಾರಣರಾಗಿದ್ದರು. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲು ಉತ್ತಮ ಪ್ರದರ್ಶನ ನೀಡಿದ ರಶೀದ್ ತಂಡ ಫೈನಲ್ ತಲುಪಲು ಕಾರಣರಾಗಿದ್ದಾರೆ.

ರಶೀದ್ ಖಾನ್ ಬ್ಯಾಟಿಂಗ್ ನಲ್ಲಿ 10 ಎಸೆತಗಳಲ್ಲಿ ಅಜೇಯ 34 ರನ್ ಸಿಡಿಸಿದ್ದರು. ಇನ್ನು ಬೌಲಿಂಗ್ ನಲ್ಲಿ 4 ಓವರ್ ನಲ್ಲಿ 19 ರನ್ ನೀಡಿ ಪ್ರಮುಖ 3 ವಿಕೆಟ್ ಗಳನ್ನು ಪಡೆದಿದ್ದರು.

Comments are closed.