ಲಂಡನ್: ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆದ ಬಾರತ-ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ನಲ್ಲಿ ಭಾರತ ಇನ್ನಿಂಗ್ಸ್ ಮತ್ತು 159 ರನ್ ಗಳ ಹೀನಾಯ ಸೋಲು ಅನುಭವಿಸಿದೆ. ಇದರೊಡನೆ ಅತಿಥೇಯ ಇಂಗ್ಲೆಂಡ್ ಐದು ಟೆಸ್ಟ್ ಗಳ ಸರಣಿಯಲ್ಲಿ 2-0 ಅಂತರ ಮುನ್ನಡೆ ಸಾಧಿಸಿದೆ.
ನಾಲ್ಕನೇ ದಿನದಾಟದ ಊಟದ ವಿರಾಮದ ವೇಳೆ ಭಾರತ ಎರಡು ವಿಕೆಟ್ ನಷ್ಟಕ್ಕೆ 17 ರನ್ ಕಲೆ ಹಾಕಿದ್ದ ಟೀಂ ಇಂಡಿಯಾ ಕೇವಲ 130 ರನ್‌ಗಳಿಗೆ ಆಲೌಟಾಗುವ ಮೂಲಕ 159 ರನ್ ಅಂತರದ ಇನ್ನಿಂಗ್ಸ್ ಸೋಲಿಗೆ ತುತ್ತಾಗಿದೆ.
ಭಾರತ ಪರವಾಗಿ ಚೇತೇಶ್ವರ ಪೂಜಾರ್ 17, ಅಜಿಂಕ್ಯ ರಹಾನೆ 13, ವಿರಾಟ್ ಕೊಹ್ಲಿ 17 ರನ್, ಹಾರ್ದಿಕ್ ಪಾಂಡ್ಯ 26, ದಿನೇಶ್ ಕಾರ್ತಿಕ್, ಕುಲದೀಪ್ ಯಾದವ್ ಹಾಗೂ ಮೊಹಮ್ಮದ್ ಶಮಿ ಶೂನ್ಯ, ಆರ್ ಅಶ್ವಿನ್ 33*, ಇಶಾಂತ್ ಶರ್ಮಾ 2 ರನ್ ಗಳಿಸಿದ್ದರು.
ಇಂಗ್ಲೆಂಡ್ ಪರ ಜೇಮ್ಸ್ ಆ್ಯಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ತಲಾ ನಾಲ್ಕು ವಿಕೆಟ್ ಪಡೆದು ಮಿಂಚಿದ್ದರು. ಕ್ರಿಸ್ ವೋಕ್ಸ್ 2 ವಿಕೆಟ್ ಕಿತ್ತರು.
ಇನ್ನು ಭಾರತ ಇಂಗ್ಲೆಂಡ್ ನೆಲದಲ್ಲಿ ಸರಣಿ ಜಯ ಸಾಧಿಸಬೇಕಾದಲ್ಲಿ ಉಳಿದ ಮೂರೂ ಪಂದ್ಯಗಳನ್ನು ಗೆಲ್ಲ್ಲುವುದು ಅನಿವಾರ್ಯವಾಗಿದೆ,
Comments are closed.