ದುಬೈ: ಏಷ್ಯಾ ಕಪ್ 2018 ಕ್ರಿಕೆಟ್ ಟೂರ್ನಮೆಂಟ್ನಲ್ಲಿ ಮಂಗಳವಾರ ನಡೆದ ಭಾರತ ಹಾಗೂ ಅಫಘಾನಿಸ್ತಾನ ನಡುವಣ ಸೂಪರ್ ಫೋರ್ ಹಂತದ ಪಂದ್ಯ ರೋಚಕ ಟೈನಲ್ಲಿ ಅಂತ್ಯಕಂಡಿದೆ.
ಕೊನೆಯ ಓವರ್ನಲ್ಲಿ ಭಾರತದ ಗೆಲುವಿಗೆ ಏಳು ರನ್ಗಳ ಅವಶ್ಯಕತೆಯಿತ್ತು. ರವೀಂದ್ರ ಜಡೇಜಾ ಬೌಂಡರಿ ಸಿಡಿಸಿ ಭಾರತ ತಂಡವನ್ನು ಗೆಲುವಿನ ಸನಿಹಕ್ಕೆ ತಲುಪಿಸಿದರೂ ರಶೀದ್ ಖಾನ್ ಅವರ ಐದನೇ ಎಸೆತದಲ್ಲಿ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದ್ದರು.
ಇದರೊಂದಿಗೆ ಸ್ಕೋರ್ ಸಮಬಲಗೊಂಡಿತ್ತು. ಭಾರತ ಇನ್ನೇನು ಗೆಲುವು ದಾಖಲಿಸಿತು ಎನ್ನುವಷ್ಟರಲ್ಲಿ ಪಂದ್ಯ ರೋಚಕ ಟೈ ಫಲಿತಾಂಶ ಕಂಡಿತು. ಈ ಎಲ್ಲ ರೋಚಕ ಕ್ಷಣಗಳನ್ನು ಸ್ಟೇಡಿಯಂನಲ್ಲಿ ತನ್ನ ಅಪ್ಪನ ಜೊತೆ ನಿಂತು ನೋಡುತ್ತಿದ್ದ ಪುಟ್ಟ ಕಂದ, ಕಣ್ಣೀರು ಸುರಿಸಿರುವುದು ಇಡೀ ಕ್ರಿಕೆಟ್ ಲೋಕದ ಮನ ಕರಗಿಸಿದೆ.
ಇಷ್ಟು ಚಿಕ್ಕ ವಯಸ್ಸಿನಲ್ಲೂ ಕ್ರಿಕೆಟ್ನ್ನು ಅರ್ಥ ಮಾಡಿರುವ ರೀತಿ ಹಾಗೂ ಅದನ್ನು ಆಳವಡಿಸಿಕೊಂಡಿರುವ ರೀತಿಯು ಭಾರತದಲ್ಲಿ ಕ್ರಿಕೆಟ್ ಇಷ್ಟೊಂದು ಜನಪ್ರಿಯ ಕ್ರೀಡೆ ಏಕೆ ಎಂಬುದಕ್ಕೆ ಸ್ಪಷ್ಟ ಉತ್ತರ ದೊರುಕತ್ತದೆ.
ಇದನ್ನೇ ಉಲ್ಲೇಖಿಸಿರುವ ಟರ್ಬನೇಟರ್ ಹರ್ಭಜನ್ ಸಿಂಗ್ ಸಹ, ಹೆದರಬೇಡ ಪುಟ್ಟ, “ನಮ್ಮ ತಂಡವು ಫೈನಲ್ನಲ್ಲಿ ಗೆಲ್ಲಲಿದೆ” ಎಂದು ಟ್ವೀಟ್ ಮಾಡಿದ್ದಾರೆ.
ಅಳುತ್ತಾ ನಿಂತಿರುವ ಮಗನನ್ನು ಅಪ್ಪ ಸಂತೈಸುವ ರೀತಿಯಂತೂ ಎಲ್ಲರ ಹೃದಯ ಗೆದ್ದಿದೆ.
Comments are closed.