ಕ್ರೀಡೆ

ವೆಸ್ಟ್​ ಇಂಡೀಸ್​ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಇನ್ನಿಂಗ್ಸ್, 272 ರನ್ ಭರ್ಜರಿ ಗೆಲುವು ಸಾಧಿಸಿದ ಭಾರತ

Pinterest LinkedIn Tumblr

ರಾಜ್ ಕೋಟ್: ವೆಸ್ಟ್​ ಇಂಡೀಸ್​ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಭಾರತ ಇನಿಂಗ್ಸ್​ ಹಾಗೂ 272 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಂಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ನ ಎರಡನೇ ದಿನದಾಟದಂತ್ಯಕ್ಕೆ 6 ವಿಕೆಟ್​ ನಷ್ಟಕ್ಕೆ 94 ರನ್​ ಗಳಿಸಿದ್ದ ವೆಸ್ಟ್​ ಇಂಡೀಸ್​ ತಂಡ, ಮೂರನೇ ದಿನದಾಟದ ಮೊದಲ ಅವಧಿಯಲ್ಲಿ 48 ಓವರ್​ಗಳಲ್ಲಿ 181 ರನ್​ ಗಳಿಸಿ ಆಲೌಟಾಯಿತು.

ಫಾಲೋಆನ್​ ಪಡೆದ ವೆಸ್ಟ್​ ಇಂಡೀಸ್​ ತಂಡ ಎರಡನೇ ಇನಿಂಗ್ಸ್​ನಲ್ಲಿ 50.5 ಓವರ್​ಗಳಲ್ಲಿ ಕೇವಲ 196 ರನ್​ ಗಳಿಸಿ ಆಲೌಟಾಗುವ ಮೂಲಕ ಸೋಲು ಅನುಭವಿಸಿತು.

ಭಾರತೀಯ ಸ್ಪಿನ್ನರ್ ಕುಲದೀಪ್ ಯಾದವ್ ಐದು ವಿಕೆಟ್ ಹಾಗೂ ಆರ್ ಅಶ್ವಿನ್ ನಾಲ್ಕು ವಿಕೆಟ್ ಪಡೆದು ಮಿಂಚಿದರು.

ಟೀಂ ಇಂಡಿಯಾ ಪೃಥ್ವಿ ಶಾ ಅವರ ಅಮೋಘ ಶತಕ (134), ನಾಯಕ ವಿರಾಟ್ ಕೊಹ್ಲಿ ಶತಕ(100) ಹಾಗೂ ರವೀಂದ್ರ ಜಡೇಜಾ(100*) ಅವರ ಚೊಚ್ಚಲ ಶತಕಗಳು ಮತ್ತು ಚೇತೇಶ್ವರ ಪೂಜಾರ (86) ಹಾಗೂ ರಿಷಭ್ ಪಂತ್ (92) ಆಕರ್ಷಕ ಅರ್ಧಶತಕಗಳ ನೆರವಿನಿಂದ ಮೊದಲ ಇನ್ನಿಂಗ್ಸ್‌ನಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 649 ರನ್‌ಗಳ ಬೃಹತ್ ಮೊತ್ತ ಪೇರಿಸಿ ಡಿಕ್ಲೇರ್ ಘೋಷಿಸಿತ್ತು.

Comments are closed.