ಕ್ರೀಡೆ

ವಿಶ್ವಕಪ್ ಮುಗಿಯುತ್ತಿದ್ದಂತೆ ಈ ಐವರು ಸ್ಟಾರ್ ಕ್ರಿಕೆಟಿಗರು ಕ್ರಿಕೆಟ್ ಗೆ ಗುಡ್ ಬೈ ಹೇಳುವ ಸಾಧ್ಯತೆ !

Pinterest LinkedIn Tumblr

ಬೆಂಗಳೂರು: 2019ರ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಈಗಾಗಲೇ ಎಲ್ಲ ತಂಡಗಳು ಕಸರತ್ತು ನಡೆಸಿವೆ. ಇನ್ನು ವಿಶ್ವಕಪ್ ಮುಗಿಯುತ್ತಿದ್ದಂತೆ ಕೆಲ ಸ್ಟಾರ್ ಆಟಗಾರರು ಕ್ರಿಕೆಟ್ ಗೆ ಗುಡ್ ಬೈ ಹೇಳುವ ಸಾಧ್ಯತೆ ಇದೆ.

ಇನ್ನು ವಿಶ್ವಕಪ್ ಪಂದ್ಯಾವಳಿಗೂ ಮುನ್ನವೇ ಕೆಲ ಸ್ಟಾರ್ ಆಟಗಾರರಾದ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ, ವೆಸ್ಟ್ ವಿಂಡೀಸ್ ನ ಡ್ವೇನ್ ಬ್ರಾವೋ ಹಾಗೂ ಇಂಗ್ಲೆಂಡ್ ನ ಅಲೆಸ್ಟರ್ ಕುಕ್ ವಿದಾಯ ಹೇಳಿದ್ದು ಯುವ ಕ್ರಿಕೆಟಿಗರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಅಂತೆ ಮುಂದಿನ ವಿಶ್ವಕಪ್ ಪಂದ್ಯಾವಳಿ ಬಳಿಕ ಇನ್ನಷ್ಟು ಹಿರಿಯ ಆಟಗಾರರು ಕ್ರಿಕೆಟ್ ಬದುಕಿಗೆ ವಿದಾಯ ಹೇಳುವ ಸಾಧ್ಯತೆ ಇದೆ.

ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ
ಬ್ಯಾಟಿಂಗ್ ನಲ್ಲಿ ವೈಫಲ್ಯ ಅನುಭವಿಸುತ್ತಿರುವ ಎಂಎಸ್ ಧೋನಿ 2019ರ ವಿಶ್ವಕಪ್ ಬಳಿಕ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸುವ ಸಾಧ್ಯತೆ ಇದೆ. ಈಗಾಗಲೇ ಅವರ ಸ್ಥಾನಕ್ಕಾಗಿ ರಿಷಬ್ ಪಂತ್ ಅವರಿಗೆ ಅವಕಾಶ ನೀಡಲಾಗುತ್ತಿದೆ.

ಕ್ರಿಸ್ ಗೇಯ್ಲ್
ಸ್ಫೋಟಕ ಬ್ಯಾಟಿಂಗ್ ಗೆ ಹೆಸರುವಾಸಿಯಾಗಿರುವ ವೆಸ್ಟ್ ಇಂಡೀಸ್ ತಂಡದ ಕ್ರಿಸ್ ಗೇಯ್ಲ್ ಅವರು ವಿಶ್ವಕಪ್ ಕಪ್ ಬಳಿಕ ಕ್ರಿಕೆಟ್ ಬದುಕಿಗೆ ವಿದಾಯ ಹೇಳುವ ಸಾಧ್ಯತೆ ಇದೆ. ಕ್ರಿಸ್ ಗೇಯ್ಲ್ ಈಗಾಗಲೇ ತಮ್ಮ ದೇಶಕ್ಕಾಗಿ ಕೆಲವೊಂದು ಪಂದ್ಯಗಳಲ್ಲಿ ಮಾತರ್ ಆಡುತ್ತಿದ್ದು ಉಳಿದಂತೆ ವಿವಿಧ ದೇಶಗಳ ಕ್ರಿಕೆಟ್ ಲೀಗ್ ಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಡೇಲ್ ಸ್ಟೇನ್
ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಡೇಲ್ ಸ್ಟೇನ್ ಕೂಡ ಕೆಲ ವರ್ಷಗಳಿಂದ ಹೇಳಿಕೊಳ್ಳುವಂತಾ ಪ್ರದರ್ಶನ ನೀಡದೆ ಇರುವುದರಿಂದ 2019ರ ವಿಶ್ವಕಪ್ ಬಳಿಕ ಕ್ರಿಕೆಟ್ ಬದುಕಿಗೆ ಗುಡ್ ಬೈ ಹೇಳಲಿದ್ದಾರೆ.

ರಾಸ್ ಟೇಲರ್
ನ್ಯೂಜಿಲೆಂಡ್ ತಂಡದ ಕ್ರಿಕೆಟಿಗ ಮಾಜಿ ನಾಯಕ ರಾಸ್ ಟೇಲರ್ ಸಹ ಹಲವು ವರ್ಷಗಳಿಂದ ನ್ಯೂಜಿಲಂಡ್ ತಂಡವನ್ನು ಪ್ರತಿನಿಧಿಸುತ್ತಿದ್ದು 2019ರ ವೇಳೆಗೆ ಕ್ರಿಕೆಟ್ ಗೆ ವಿದಾಯ ಹೇಳಲಿದ್ದಾರೆ.

ಹಾಸೀಂ ಆಮ್ಲಾ
ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಹಾಸೀಂ ಆಮ್ಲಾ ಭರ್ಬರಿ ಬ್ಯಾಟಿಂಗ್ ಮಾಡುತ್ತಿದ್ದು ಕೆಲ ತಿಂಗಳುಗಳಿಂದ ಅವರ ಬ್ಯಾಟ್ ನಿಂದ ಹೇಳಿಕೊಳ್ಳುವಂತಾ ಪ್ರದರ್ಶನ ಕಂಡುಬಂದಿಲ್ಲ. ಹೀಗಾಗಿ 35 ವರ್ಷದ ಹಾಸೀಂ ಆಮ್ಲಾ ಸಹ ಮುಂದಿನ ವರ್ಷ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸುವ ಸಾಧ್ಯತೆ ಇದೆ.

Comments are closed.