ಪರ್ತ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ಗೆ ಅಗೌರವ ತೋರಿದ್ದಾರೆ ಎಂದು ಆಸ್ಟ್ರೇಲಿಯಾ ತಂಡದ ವೇಗಿ ಮಿಚೆಲ್ ಜಾನ್ಸನ್ ಹೇಳಿದ್ದಾರೆ.
ಪರ್ತ್ ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ಮುಕ್ತಾಯದ ಬಳಿಕ ಫಾಕ್ಸ್ ಸ್ಪೋರ್ಟ್ಸ್ ನಲ್ಲಿ ಅಂಕಣವೊಂದರಲ್ಲಿ ಈ ಬಗ್ಗೆ ಬರೆದಿರುವ ಜಾನ್ಸನ್, ಆನ್ ಫೀಲ್ಡ್ ನಲ್ಲಿ ಕೊಹ್ಲಿ ವರ್ತನೆ ತುಂಬಾ ಕ್ಷುಲ್ಲಕವಾಗಿರುತ್ತದೆ. ಅಲ್ಲದೆ ಅಗೌರವದಿಂದ ಕೂಡಿರುತ್ತದೆ. ಇದಕ್ಕೆ ಪರ್ತ್ ಟೆಸ್ಟ್ ಪಂದ್ಯ ಕೂಡ ಹೊರತಾಗಿಲ್ಲ. ಸಾಮಾನ್ಯವಾಗಿ ಎಲ್ಲ ಆಟಗಾರರೂ ಪಂದ್ಯ ಮುಕ್ತಾಯದ ಬಳಿಕ ಒಬ್ಬರೊನ್ನಬ್ಬರು ಅಭಿನಂಧಿಸಿಕೊಳ್ಳುತ್ತೇವೆ. ಅಂತೆಯೇ ಪರ್ತ್ ಟೆಸ್ಟ್ ಪಂದ್ಯದ ಬಳಿಕ ಆಸಿಸ್ ನಾಯಕ ಪೈನ್ ಮತ್ತು ಕೊಹ್ಲಿ ಹಸ್ತಲಾಘವ ಮಾಡಿದರು. ಆದರೆ ಕೊಹ್ಲಿ ಪೈನೆ ಅವರನ್ನು ನೋಡಿ ಹಸ್ತಲಾಘವ ಮಾಡಲಿಲ್ಲ. ಏನೋ ಕಾಟಾಚಾರಕ್ಕೆ ಹಸ್ತಲಾಘವ ಮಾಡಿದಂತಿತ್ತು, ಇದು ಕ್ರಿಕೆಟ್ ಗೆ ಮತ್ತು ಎದುರಾಳಿ ತಂಡದ ಆಟಗಾರನಿಗೆ ತೋರಿದ ಅಗೌರವ ಎಂದು ನನಗನ್ನಿಸುತ್ತದೆ ಎಂದು ಜಾನ್ಸನ್ ಹೇಳಿದ್ದಾರೆ.
ಅಂತೆಯೇ ಸರಣಿ ಆರಂಭಕ್ಕೂ ಮುನ್ನ ಕೊಹ್ಲಿ ಸ್ಲಡ್ಜಿಂಗ್ ಮಾಡುವುದಿಲ್ಲ ಎಂದು ಹೇಳಿದ್ದರು. ಅಂದು ನಾನೂ ಕೂಡ ಅಚ್ಚರಿ ಪಟ್ಟಿದ್ದೆ. ಆದರೆ ನನ್ನಅನಿಸಿಕೆ ನಿಜವಾಗಿದ್ದು ಕೊಹ್ಲಿ ತಮ್ಮ ಮಾತು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಮೈದಾನದಲ್ಲಿ ಅವರಿಂದ ಅಂತಹ ಯಾವುದೇ ಲಕ್ಷಣಗಳೂ ಕೂಡ ಕಾಣಲಿಲ್ಲ. ಕೊಹ್ಲಿ ಜೊತೆ ನಾನು ಸಾಕಷ್ಟು ಪಂದ್ಯವಾಡಿದ್ದೇನೆ. ನನ್ನ ಅನುಭವದ ಮೇರೆಗೆ ಹೇಳುವುದಾದರೆ ಮೈದಾನದಲ್ಲಿನ ಕೊಹ್ಲಿ ವರ್ತನೆಯಲ್ಲಿ ನಾನು ಯಾವುದೇ ರೀತಿಯ ಬದಲಾವಣೆ ಕಂಡಿಲ್ಲ. ಅವರ ಆಕ್ರಮಣಕಾರಿ ಮನೋಭಾವ ಮತ್ತು ಎದುರಾಳಿ ಆಟಗಾರರನ್ನು ಕಿಚಾಯಿಸುವ ಪರಿ ಮುಂದುವರೆದಿದೆ.
ಮೊದಲ ಇನ್ನಿಂಗ್ಸ್ ನಲ್ಲಿ ಕೊಹ್ಲಿ ತುಂಬಾ ಅದ್ಬುತವಾಗಿ ಆಡಿ ಶತಕ ಸಿಡಿಸಿದ್ದರು. ತಂಡ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಅವರು ಬ್ಯಾಟಿಂಗ್ ಅಮೂಲ್ಯವಾಗಿತ್ತು. ಆದರೆ ಪೀಟರ್ ಹ್ಯಾಂಡ್ಸ್ ಕಾಂಬ್ ಕ್ಯಾಚ್ ಹಿಡಿದಾಗ ಅಂಪೈರ್ ಔಟ್ ನೀಡಿದ್ದರು. ಅಂಪೈರ್ ತೀರ್ಪನ್ನು ಗೌರವಿಸಿ ಕೊಹ್ಲಿ ಹೊರ ನಡೆದಿದ್ದರೆ ಅವರ ಗೌರವ ಹೆಚ್ಚಾಗುತ್ತಿತ್ತು. ಆದರೆ ಕೊಹ್ಲಿ ಹಾಗೆ ಮಾಡಲಿಲ್ಲ. ನಿಜಕ್ಕೂ ಇದು ಬೇಸರ ತಂದಿದೆ. ಇದು ಕ್ರಿಕೆಟ್ ನಾವು ತೋರುವ ಅಗೌರವ ಎಂದು ಜಾನ್ಸನ್ ಅಭಿಪ್ರಾಯಪಟ್ಟಿದ್ದಾರೆ.
Comments are closed.