ಕ್ರೀಡೆ

2019ರ ಐಸಿಸಿ ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ಆಡಬಾರದು: ಹರಭಜನ್‌ ಸಿಂಗ್‌

Pinterest LinkedIn Tumblr

ನವದೆಹಲಿ: 2019ರ ಐಸಿಸಿ ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ಆಡಬಾರದೆಂದು ಭಾರತೀಯ ಕ್ರಿಕೆಟ್‌ ಅಭಿಮಾನಿಗಳಿಂದ ಒತ್ತಾಯ ಕೇಳಿ ಬಂದ ಬೆನ್ನಲ್ಲೆ ಇದೀಗ ಭಾರತದ ಹಿರಿಯ ಸ್ಪಿನ್ನರ್‌ ಹರಭಜನ್‌ ಸಿಂಗ್‌ ಕೂಡ ಇದಕ್ಕೆ ಧನಿ ಎತ್ತಿದ್ದಾರೆ.

ಕಳೆದ ಫೆ.14 ರಂದು ಕಣಿವೆ ರಾಜ್ಯ ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರು ನಡೆಸಿದ್ದ ದಾಳಿಯಲ್ಲಿ 44 ಸಿಆರ್‌ಪಿಎಫ್‌ ಯೋಧರು ಹುತಾತ್ಮರಾಗಿದ್ದರು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ವಿಶ್ವಕಪ್‌ನಲ್ಲಿ ಮುಖಾಮುಖಿಯಾಗಬಾರದೆಂದು ಹರಭಜನ್ ಸಿಂಗ್‌ ಆಗ್ರಹಿಸಿದ್ದಾರೆ.

ಪುಲ್ವಾಮಾ ದಾಳಿಯಿಂದ ದೇಶವಿಡಿ ಆಕ್ರೋಶ ವ್ಯಕ್ತವಾಗಿದೆ. ಪಾಕಿಸ್ತಾನ ಬೆಂಬಲಿತ ಉಗ್ರರು ಈ ದಾಳಿಯ ರೂವಾರಿಗಳಾಗಿದ್ದಾರೆ. ಪಾಕಿಸ್ತಾನದ ಜತೆ ಎಲ್ಲ ಸಂಬಂಧಗಳನ್ನು ಭಾರತ ಕಡಿದುಕೊಳ್ಳಲು ತೀರ್ಮಾನಿಸಿದೆ. ಅದರಂತೆ ಇಂಗ್ಲೆಂಡ್‌ನಲ್ಲಿ ನಡೆಯುವ ಐಸಿಸಿ ವಿಶ್ವಕಪ್‌ ನಲ್ಲಿಯೂ ಭಾರತ, ಪಾಕ್‌ ಜತೆ ಆಡಬಾರದು ಎಂದು ಹೇಳಿದ್ದಾರೆ.

Comments are closed.