ಕ್ರೀಡೆ

ಈ ಬಾರಿಯ ವಿಶ್ವಕಪ್‌ನಲ್ಲಿ ಸೆಣಸಾಡಲಿರುವ ಬಲಿಷ್ಠ ತಂಡಗಳು – ಸ್ಟಾರ್ ಆಟಗಾರರು ಯಾರು ನೋಡಿ…!

Pinterest LinkedIn Tumblr

2019ರ ವಿಶ್ವಕಪ್ ಗೆ ಇನ್ನೂ 100 ದಿನಗಳು ಬಾಕಿಯಿದ್ದು ಈ ಮಧ್ಯೆ ಟೂರ್ನಿಯ ಕುರಿತಂತೆ ನಿರೀಕ್ಷೆಗಳು ಜಾಸ್ತಿಯಾಗುತ್ತಿವೆ. ಮೇ 30ರಿಂದ ಇಂಗ್ಲೆಂಡ್ ನಲ್ಲಿ ಆರಂಭಗೊಳ್ಳಲಿರುವ ಟೂರ್ನಿಯಲ್ಲಿ ಆಡುತ್ತಿರುವ ಬಲಿಷ್ಠ ತಂಡಗಳು ಹಾಗೂ ಪಂದ್ಯದ ಗತಿಯನ್ನೇ ಬದಲಿಸುವ ಪ್ರಮುಖ ಆಟಗಾರರ ದಂಡೆ ಇಲ್ಲಿದೆ.

ಆಫ್ಗಾನಿಸ್ತಾನ
2015ರ ವಿಶ್ವಕಪ್ ನಲ್ಲಿ ಮೊದಲ ಬಾರಿಗೆ ಆಡಿದ್ದ ಆಫ್ಗಾನಿಸ್ತಾನ ತಂಡ ಸದ್ಯ ಉತ್ತಮ ಆಟ ಪ್ರದರ್ಶನ ನೀಡುವ ಮೂಲಕ 2019ರ ವಿಶ್ವಕಪ್ ಟೂರ್ನಿಗೂ ಆಯ್ಕೆಯಾಗಿದೆ. ವಿಶ್ವಕಪ್ ಗೆ ಅರ್ಹತಾ ಟೂರ್ನಿಯಲ್ಲಿ ಜಿಂಬಾಬ್ವೆಯಂತ ತಂಡವನ್ನೇ ಮಣಿಸಿ ಮುಂಬವರು ವಿಶ್ವಕಪ್ ಗೆ ಎಂಟ್ರಿ ಕೊಟ್ಟಿದೆ.

ಪ್ರಮುಖ ಆಟಗಾರ: ಆಫ್ಗಾನಿಸ್ತಾನ ತಂಡದ ಪ್ರಮುಖ ಆಟಗಾರ ಎಂದರೆ ರಶೀದ್ ಖಾನ್. ತಮ್ಮ ಲೆಗ್ ಸ್ಪಿನ್ ಮೂಲಕ ಬಲಿಷ್ಠ ಬ್ಯಾಟ್ಸ್ ಮನ್ ಗಳ ವಿಕೆಟ್ ಗಳನ್ನೇ ಕಬಳಿಸುವ ಮೂಲಕ ಕಠಿಣ ಸ್ಪರ್ಧೆ ನೀಡುತ್ತಿದ್ದಾರೆ. ಇನ್ನು ಆಡಿದ 44 ಪಂದ್ಯಗಳಲ್ಲೇ ವೇಗವಾಗಿ 100 ವಿಕೆಟ್ ಪಡೆದ ಆಟಗಾರ ಎಂಬ ಖ್ಯಾತಿಗೂ ರಶೀದ್ ಭಾಜನರಾಗಿದ್ದಾರೆ.

ಆಸ್ಟ್ರೇಲಿಯಾ
ಐದು ಬಾರಿ ಐಸಿಸಿ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ಬಲಿಷ್ಠ ತಂಡಗಳಲ್ಲಿ ಒಂದು. 2015ರ ವಿಶ್ವಕಪ್ ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 7 ವಿಕೆಟ್ ಗಳಿಂದ ಪಂದ್ಯ ಗೆದ್ದು ಚಾಂಪಿಯನ್ ಆಗಿತ್ತು. ಸದ್ಯ ಚೆಂಡು ವಿರೂಪ ಪ್ರಕರಣದಿಂದಾಗಿ ಆಸ್ಟ್ರೇಲಿಯಾಗೆ ಕೊಂಚ ಹಿನ್ನಡೆಯಾಗಿದೆ.

ಪ್ರಮುಖ ಆಟಗಾರರು: ಚೆಂಡು ವಿರೂಪ ಪ್ರಕರಣದಲ್ಲಿ ಸಿಕ್ಕು ಒಂದು ವರ್ಷದ ನಿಷೇಧಕ್ಕೆ ಒಳಗಾಗಿರುವ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಆಸ್ಟ್ರೇಲಿಯಾದ ಸ್ಟಾರ್ ಆಟಗಾರರು. ಇವರ ಒಂದು ವರ್ಷದ ನಿಷೇಧ ಮಾರ್ಚ್ ಗೆ ಅಂತ್ಯವಾಗಲಿದ್ದು ಮುಂದಿನ ವಿಶ್ವಕಪ್ ಗೆ ಎಂಟ್ರಿ ಕೊಡಲಿದ್ದಾರೆ.

ಬಾಂಗ್ಲಾದೇಶ
2017ರ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಗೆ ಎಂಟ್ರಿ ಕೊಡುವ ಮೂಲಕ ಬಲಿಷ್ಠ ತಂಡಗಳಿಗೆ ತನ್ನ ತಾಕತ್ತು ತೋರಿಸಿತ್ತು. 2018ರಲ್ಲಿ ಬಾಂಗ್ಲಾದೇಶ 20 ಏಕದಿನ ಪಂದ್ಯಗಳ ಪೈಕಿ 13 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇಂಗ್ಲೆಂಡ್ ಮತ್ತು ಭಾರತ ನಂತರ ಅತೀ ಹೆಚ್ಚು ಪಂದ್ಯಗಳನ್ನು ಗೆದ್ದಿರುವ ತಂಡವಾಗಿದೆ.

ಪ್ರಮುಖ ಆಟಗಾರರು: 35ರ ಹರೆಯದಲ್ಲೂ ಮುಶ್ರಫೆ ಉತ್ತಮವಾಗಿ ಆಡುತ್ತಿದ್ದು ತಂಡಕ್ಕೆ ಆಧಾರಸ್ಥಂಭವಾಗಿದ್ದಾರೆ. ಇನ್ನು ಮುಸ್ತಫಿಜೂರ್ ರೆಹಮಾನ್ ತಮ್ಮ ಬ್ಯಾಟಿಂಗ್ ನಿಂದ ಮಿಂಚು ಹರಿಸಿದ್ದಾರೆ.

ಇಂಗ್ಲೆಂಡ್
ಕ್ರಿಕೆಟ್ ಜನಕ ಇಂಗ್ಲೆಂಡ್ ಇಲ್ಲಿಯವರೆಗೂ ಒಂದೇ ಒಂದು ವಿಶ್ವಕಪ್ ಅನ್ನು ಗೆದ್ದಿಲ್ಲ. 1992ರಲ್ಲಿ ಫೈನಲ್ ಗೆ ಎಂಟ್ರಿ ಕೊಟ್ಟಿದ್ದು ಬಿಟ್ಟರೆ ಚಾಂಪಿಯನ್ ಪಟ್ಟ ಅಲಂಕರಿಸಿಲ್ಲ. ವಿಶ್ವಕಪ್ ಗೆದ್ದಿಲ್ಲ ಎಂಬ ಕೊರಗೂ ಇಂಗ್ಲೆಂಡ್ ನಲ್ಲಿ ಮಡುಗಟ್ಟಿದೆ. ಈ ಬಾರಿ ಗೆಲ್ಲುವ ತವಕದಲ್ಲಿರುವ ಇಂಗ್ಲೆಂಡ್ ತಂಡದಲ್ಲಿ ಬಲಿಷ್ಠ ಆಟಗಾರರಿದ್ದು ಟೂರ್ನಿ ಗೆಲ್ಲುವ ತವಕದಲ್ಲಿದೆ.

ಪ್ರಮುಖ ಆಟಗಾರರು: ಇಂಗ್ಲೆಂಡ್ ತಂಡದ ವಿಕೆಟ್ ಕೀಪರ್ ಜೋಸ್ ಬಟ್ಲರ್ ತಂಡದ ಸ್ಟಾರ್ ಆಟಗಾರ. 28 ವರ್ಷದ ಬಟ್ಲರ್ ಆರು ಶತಕ ಬಾರಿಸಿದ್ದು 117 ಸ್ಟ್ರೈಕ್ ರೇಟ್ ಹೊಂದಿರುವ ಬಟ್ಲರ್ ಭರ್ಜರಿ ಬ್ಯಾಟಿಂಗ್ ನಿಂದ ತಂಡಕ್ಕೆ ಆಸರೆಯಾಗಿದ್ದಾರೆ.

ಟೀಂ ಇಂಡಿಯಾ
ಇಂಗ್ಲೆಂಡ್ ತರಹ ವಿಶ್ವಕಪ್ ಗೆಲ್ಲುವ ಫೆವರೀಟ್ ತಂಡಗಳಲ್ಲಿ ಟೀಂ ಇಂಡಿಯಾ ಸಹ ಒಂದು. ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಸರಣಿಯನ್ನು ಗೆಲ್ಲುವ ಮೂಲಕ ಭಾರತ ಆತ್ಮವಿಶ್ವಾಸದಲ್ಲಿದೆ. 2018ರಲ್ಲಿ ದಕ್ಷಿಣ ಆಫ್ರಿಕಾ(5-1), ಮತ್ತು ವೆಸ್ಟ್ ಇಂಡೀಸ್(3-1) ಮತ್ತು ಏಷ್ಯಾಕಪ್ ಚಾಂಪಿಯನ್ ಆಗಿದೆ.

ಪ್ರಮುಖ ಆಟಗಾರರು: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ನಲ್ಲಿ ಸ್ಫೋಟಿಸುತ್ತಿದ್ದರೆ ಯುವ ಸ್ಪಿನ್ನರ್ ಚೈನಮನ್ ಖ್ಯಾತಿಯ ಕುಲದೀಪ್ ಯಾದವ್ ಸಹ ಬೌಲಿಂಗ್ ವಿಭಾಗದಲ್ಲಿ ಪ್ರಮುಖ ಅಸ್ತ್ರವಾಗಿದ್ದಾರೆ. ಕುಲದೀಪ್ ಆಡಿರುವ 19 ಪಂದ್ಯಗಳಲ್ಲಿ 45 ವಿಕೆಟ್ ಗಳಿಸಿದ್ದಾರೆ.

Comments are closed.