ಕ್ರೀಡೆ

ಮುಂಬೈ ಇಂಡಿಯನ್ಸ್’ಗೆ ಸೋಲಿನ ರುಚಿ ತೋರಿಸಿದ ಡೆಲ್ಲಿ; ಯುವರಾಜ್ ಸಿಂಗ್ ಹೋರಾಟ ವ್ಯರ್ಥ

Pinterest LinkedIn Tumblr

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2019ನೇ ಆವೃತ್ತಿಯ ದ್ವಿತೀಯ ದಿನವಾದ ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 37 ರನ್ ಗಳ ಜಯ ಸಾಧಿಸಿದೆ.

ಟಾಸ್ ಸೋತು ಬ್ಯಾಟಿಂಗ್ ನಡೆಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ನ ರಿಷಬ್ ಪಂತ್ ಅರ್ಧಶತಕ (78*)ದ ನೆರವಿನಿಂದ ನಿಗದಿತ ಇಪ್ಪತ್ತು ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿತ್ತು.

ಡೆಲ್ಲಿ ಪರವಾಗಿ ಪ್ರಥ್ವಿ ಶಾ (7), ಶಿಖರ್ ಧವನ್ (43), ಶ್ರೇಯಸ್ ಅಯ್ಯರ್ (16), ಕಾಲಿನ್ ಇಂಗ್ರಾಮ್ (47), ರಿಷಬ್ ಪಂತ್ (78) ಕೀಮು ಪೌಲ್ (3), ಅಕ್ಸರ್ ಪಟೇಲ್ (4) ಹಾಗೂ ರಾಹುಲ್ (9) ರನ್ ಗಳಿಸಿದ್ದರು.

ಡೆಲ್ಲಿ ನೀಡಿದ್ದ ಬೃಹತ್ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಪರ ಯುವರಾಜ್ ಸಿಂಗ್ (53) ಉತ್ತಮ ಬ್ಯಾಟಿಂಗ್ ನಡೆಸಿದರೂ ಗೆಲುವು ಸಾಧಿಸುವಲ್ಲಿ ವಿಫಲವಾಗಿತ್ತು. ಮುಂಬೈ ತಂಡ 19.2 ಓವರ್ ಗಳಲ್ಲಿ 176 ರನ್ ಗಳಿಸುವಷ್ಟರಲ್ಲೇ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.

ಇದರೊಡನೆ ಮೂರು ಬಾರಿಯ ಚಾಂಪಿಯನ್ ಮುಂಬೈ ಗೆ ಐಪಿಎಲ್ – 12ರ ಪ್ರಾರಂಭಿಕ ಪಂದ್ಯದಲ್ಲೇ ಸೋಲಿನ ಕಹಿ ಅನುಭವವಾಗಿದೆ. ಇದೇ ವೇಳೆ ಎದುರಾಳಿ ಡೆಲ್ಲಿ ತಂಡ ಗೆಲುವಿನ ಶುಭಾರಂಭ ಮಾಡಿದೆ.

ಮುಂಬೈ ಪರವಾಗಿ ಯುವರಾಜ್ ಸಿಡಿಲಬ್ಬರದ ಅರ್ಧ ಶತಕ ಸಿಡಿಸಿದ್ದರೆ ರೋಹಿತ್ ಶರ್ಮಾ (13), ಸೂರ್ಯಕುಮಾರ್ ಯಾದವ್ (2), ಕ್ವಿಂಟನ್ ಡಿ ಕಾಕ್ (27), ಕೀರಾನ್ ಪೊಲಾರ್ಡ್(21), ಹಾರ್ದಿಕ್ ಪಾಂಡ್ಯ (0), ಕೃುಣಾಲ್ (32 ) ರನ್ ಗಳಿಸಿದ್ದರು. ಯುವರಾಜ್ ಸಿಂಗ್ ನಾಲ್ಕು ಬೌಂಡರಿ ಹಾಗೂ ಮೂರು ಸಿಕ್ಸರ್‌ ಸಿಡಿಸಿ ಗಮನ ಸೆಳೆದರು.
ಇದಲ್ಲದೆ ಪಂದ್ಯದ ವೇಳೆ ಗಾಯಾಳುವಾಗಿದ್ದ ಜಸ್ಪ್ರೀತ್ ಬುಮ್ರಾ ಮುಂಬೈ ಪರ ಬ್ಯಾಟಿಂಗ್ ನಡೆಸ್ದೆ ಪೆವಿಲಿಯನ್ ನಲ್ಲಿಯೇ ಉಳಿದಿದ್ದರು.

ಇನ್ನು ಮುಂಬೈ ಪರ ಮಿಷೆಲ್ 3, ಜಸ್ಪ್ರಿತ್ ಬುಮ್ರಾ , ಹಾರ್ದಿಕ್ ಪಾಂಡ್ಯ ಹಾಗೂ ಬೆನ್ ಕಟಿಂಗ್ ತಲಾ ಒಂದೊಂದು ವಿಕೆಟ್ ಪಡೆಇದ್ದರು. ಡೆಲ್ಲಿ ಪರವಾಗಿ ಇಶಾಂತ್ ಶರ್ಮಾ, ಕೆ. ರಬಾಡಾ ತಲಾ ಎರಡು, ಬೋಲ್ಟ್, ರಾಹುಲ್, ಪೌಲ್ ಹಾಗೂ ಅಕ್ಸರ್ ಪಟೇಲ್ ತಲಾ ಒಂದೊಂದು ವಿಕೆಟ್ ಕಬಳಿಸಿದ್ದರು.

Comments are closed.