ಹೆಲಿಕಾಫ್ಟರ್ ಶಾಟ್ ಸೃಷ್ಟಿಕರ್ತ ಎಂಎಸ್ ಧೋನಿ ಮುಂದೆ ಹಾರ್ದಿಕ್ ಪಾಂಡ್ಯ ಪರ್ಫೆಕ್ಟ್ ಆಗಿ ಹೆಲಿಕಾಫ್ಟರ್ ಶಾಟ್ ಹೊಡೆದಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಪಂದ್ಯಾವಳಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಭರ್ಜರಿ ಬ್ಯಾಟಿಂಗ್ ಮಾಡಿದ್ದು ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
Pandya's pulls off MSD's helicopter shot https://t.co/0VsuHPwfzc via @ipl
— Cricket Junkie (@JunkieCricket) April 3, 2019
ಪಂದ್ಯದ ಅಂತಿಮ ಓವರ್ ನ ಡ್ವೈನ್ ಬ್ರಾವೋ ಅವರ ನಾಲ್ಕನೇ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಹೆಲಿಕಾಫ್ಟರ್ ಶಾಟ್ ಹೊಡೆದಿದ್ದು ಇದಕ್ಕೆ ನೆಟಿಗರು ಪ್ರಶಂಸಿಸಿದ್ದಾರೆ.
ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ 37 ರನ್ ಗಳಿಗೆ ಗೆಲುವು ಸಾಧಿಸಿತು.
Comments are closed.