ಜೋಸ್ ಬಟ್ಲರ್ ರನ್ನು ಮಂಕಡ್ ರೀತಿ ಔಟ್ ಮಾಡಿದ್ದ ಆರ್ ಅಶ್ವಿನ್ ಅವರ ಕ್ರೀಡಾಸ್ಫೂರ್ತಿ ಬಗ್ಗೆ ಜಾಗತಿಕವಾಗಿ ಟೀಕೆ ವ್ಯಕ್ತವಾಗಿತ್ತು. ಆದರೆ ಇದೀಗ ಮತ್ತೆ ಅಶ್ವಿನ್ ಮಂಕಡ್ ಗೆ ಯತ್ನಿಸಿದ್ದು ಆದರೆ ಈ ಬಾರಿ ಡೇವಿಡ್ ವಾರ್ನರ್ ಬಕ್ರ ಆಗಲಿಲ್ಲ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
No, Warner doesn't want to get 'Mankaded' https://t.co/DUSt66yf3I via @ipl
— Utkarsh Bhatla (@UtkarshBhatla) April 8, 2019
ಐಪಿಎಲ್ ಪಂದ್ಯಾವಳಿಯಲ್ಲಿ ಹೈದರಾಬಾದ್ ಪರ ಆಡುತ್ತಿರುವ ಡೇವಿಡ್ ವಾರ್ನರ್ ಅವರು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಆರ್ ಅಶ್ವಿನ್ ಬೌಲಿಂಗ್ ನಲ್ಲಿ ಜಾಣ್ಮೆಯ ಆಟ ಪ್ರದರ್ಶಿಸಿದ್ದರ ಪರಿಣಾಮ ಮಂಡಕ್ ಗೆ ಬಲಿಯಾಗಲಿಲ್ಲ.
ಆರ್ ಅಶ್ವಿನ್ ತಮ್ಮ ಬೌಲಿಂಗ್ ನ ಮೊದಲ ಎಸೆತದಲ್ಲೇ ಮಂಕಡ್ ಗೆ ಯತ್ನಿಸಿದ್ದರು ಎಂಬುದಕ್ಕೆ ಈ ದೃಶ್ಯಗಳು ಪುಷ್ಠಿ ಕೊಡುತ್ತದೆ. ನಿಧಾನವಾಗಿ ಬೌಲಿಂಗ್ ಮಾಡಿದ್ದರು. ಈ ವೇಳೆ ವಾರ್ನರ್ ಕ್ರಿಸ್ ನಿಂದ ಬ್ಯಾಟ್ ಹಿಡಿದು ಮುಂದಕ್ಕೆ ಹೋಗಿದ್ದರು. ಕೂಡಲೇ ಎಚ್ಚೇತ್ತ ಅವರು ಬ್ಯಾಟ್ ಅನ್ನು ಕ್ರಿಸ್ ನೊಳಗೆ ತಂದರು. ಇದರಿಂದ ಅಶ್ವಿನ್ ಎಂದಿನಂತೆ ಬೌಲಿಂಗ್ ಮಾಡಿದ್ದರು. ಸದ್ಯ ಈ ವಿಡಿಯೋ ಇದೀಗ ವೈರಲ್ ಆಗಿದೆ.
Comments are closed.