ಬೆಂಗಳೂರು: 2019ರ ಐಪಿಎಲ್ ಟೂರ್ನಿಯಲ್ಲಿ ಕಳೆದ ಭಾನುವಾರ ನಡೆದ ಪಂದ್ಯದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂಪೈರ್ ನಿಗೆಲ್ ಲಾಂಗ್ ಕೊಹ್ಲಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೇ ಸಿಟ್ಟಿನಲ್ಲಿ ಪಂದ್ಯದ ಬಳಿಕ ಕೊಠಡಿಗೆ ತೆರಳಿ ರೂಮ್ ಬಾಗಿಲಿಗೆ ಒದ್ದು ಹಾನಿ ಮಾಡಿದ್ದಾರೆ. ಈ ಕುರಿತಂತೆ ಸದ್ಯ ಅವರು ಬಿಸಿಸಿಐ ವಿಚಾರಣೆ ಎದುರಿಸುವ ಸಾಧ್ಯತೆ ಇದೆ.
50 ವರ್ಷದ ಇಂಗ್ಲೆಂಡ್‍ಗೆ ಸೇರಿರುವ ನಿಗೆಲ್ ಲಾಂಗ್ ಪಂದ್ಯದ ವೇಳೆ ಕೊಹ್ಲಿರೊಂದಿಗೆ ವಾಗ್ವಾದ ಕೂಡ ನಡೆಸಿದ್ದರು. ಆ ಬಳಿಕ ಇನ್ನಿಂಗ್ಸ್ ಬ್ರೇಕ್ ಪಡೆದ ವೇಳೆ ಘಟನೆ ನಡೆದಿದೆ ಎಂಬ ಮಾಹಿತಿ ಲಭಿಸಿದೆ.
ನಡೆದಿದ್ದೇನು?
ಹೈದರಾಬಾದ್ ವಿರುದ್ಧದ ಪಂದ್ಯದ 20ನೇ ಓವರನ್ನ ಉಮೇಶ್ ಯಾದವ್ ಬೌಲ್ ಮಾಡಿದ್ದರು. ಈ ವೇಳೆ ಓವರಿನ ಉಮೇಶ್ ಎಸೆದ ಗುಡ್ ಬಾಲ್ ಆಗಿದ್ದರೂ ಕೂಡ ಅಂಪೈರ್ ಲೈನ್ ನೋಬಾಲ್ ಎಂದು ತೀರ್ಪು ನೀಡಿದ್ದರು. ಆ ಬಳಿಕ ರಿವ್ಯೂನಲ್ಲಿ ಅಂಪೈರ್ ನಿರ್ಧಾರ ತಪ್ಪಾಗಿರುವುದು ಕಂಡು ಬಂತು. ಈ ಹಂತದಲ್ಲಿ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಅಂಪೈರ್ ಬಳಿ ಪ್ರಶ್ನಿಸಿದ್ದರು. ಈ ವೇಳೆ ಅಂಪೈರ್ ನಿಗೆಲ್ ಹಾಗೂ ಕೊಹ್ಲಿ ನಡುವೆ ಮಾತಿನ ಚಕಮಕಿ ನಡೆದಿತ್ತು.
ಸದ್ಯ ಘಟನೆ ಕುರಿತಂತೆ ಕೆಎಸ್‍ಸಿಎ ಕಾರ್ಯದರ್ಶಿಗಳಾದ ಆರ್ ಸುಧಾಕರ್ ರಾವ್ ಅವರ ಅಂಪೈರ್ ವಿರುದ್ಧ ಕ್ರಮಕ್ಕೆ ಬಿಸಿಸಿಐಗೆ ಮನವಿ ಮಾಡಿದ್ದಾರೆ. ಆಟಗಾರತು ತಪ್ಪು ಮಾಡಿದ ಮೇಲೆ ಕ್ರಮಕೈಗೊಳ್ಳುವಂತೆಯೇ ಅಂಪೈರ್ ವಿರುದ್ಧ ಕೂಡ ಕ್ರಮ ಕೈಗೊಂಡು 5 ಸಾವಿರ ರೂ. ದಂಡ ಪಾವತಿಸಲು ಆದೇಶಿಸುವಂತೆ ಬಿಸಿಸಿಐಗೆ ಕೋರಿದ್ದಾರೆ.
ನಿಗೆಲ್ ಅವರು ಇದುವರೆಗೂ 56 ಟೆಸ್ಟ್, 123 ಏಕದಿನ ಹಾಗೂ 32 ಟಿ20 ಅಂತರಾಷ್ಟ್ರಿಯ ಪಂದ್ಯಗಳಿಗೆ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ.
Comments are closed.