ಕ್ರೀಡೆ

ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಸೋಲಿಸುವ ಮೂಲಕ ಫೈನಲ್‌ಗೆ ಲಗ್ಗೆ ಇಟ್ಟ ಮುಂಬೈ ಇಂಡಿಯನ್ಸ್

Pinterest LinkedIn Tumblr

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ನೇ ಆವೃತ್ತಿಯ ಪ್ರಥಮ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಬಗ್ಗು ಬಡಿದ ಮುಂಬೈ ಇಂಡಿಯನ್ಸ್ ಫೈನಲ್ ಪ್ರವೇಶಿಸಿದೆ. ಚೆನ್ನೈ ವಿರುದ್ಧ ಮುಂಬೈ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿ ತವರಿನಲ್ಲೇ ಧೋನಿ ಪಡೆಯನ್ನು ಸೋಲಿನ ದವಡೆಗೆ ತಳ್ಲಿದೆ.

ಚೆನ್ನೈನ ಎಂಎ ಚ್ದಂಬರಂ ಸ್ಟೇಡಿಯಂ ನಲ್ಲಿ ಟಾಸ್ ಗೆದ್ದ ಚೆನ್ನೈ ನಾಯಕ ಧೋನಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಪ್ರಾರಂಭದಲ್ಲಿ ಫೀಲ್ಡ್ ಗಿಳಿದ ಫಾಫ್ ಡು ಪ್ಲೆಸಿಸ್ (6), ಶೇನ್ ವಾಟ್ಸನ್ (10) ಹಾಗೂ ಸುರೇಶ್ ರೈನಾ (5) ಒಬ್ಬರ ಹಿಂದೊಬ್ಬರು ಪೆವಿಲಿಯನ್ ಸೇರಿದ್ದರು.

ಈ ನಂತರ ಬಂದ ಅಂಬಟಿ ರಾಯಡು(42*) ಮತ್ತು ಮುರಳಿ ವಿಜಯ್ (26) ತಂಡಕ್ಕೆ ಆಗಬಹುದಾಗಿದ್ದ ಬಾರೀ ಹಿನ್ನಡೆಯನ್ನು ತಗ್ಗಿಸಿದ್ದರು.

ಇದರೊಡನೆ ವಿಜಯ್ ಮರಳಿದ ಬಳಿಕ ರಾಯಡುಗೆ ಜತೆಯಾದ ನಾಯಕ ಎಂ.ಎಸ್. ಧೋನಿ 3 ಸಿಕ್ಸರ್ ನೆರವಿನೊಂದಿಗೆ 29 ಎಸೆತದಲ್ಲಿ 37 ರನ್ ಗಳಿಸಿ ಅಜೇಯರಾಗಿ ಉಳಿದರು.

ಹೀಗೆ ಚೆನ್ನೈ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 131 ರನ್ ಗಳಿಸಿತ್ತು. ಮುಂಬೈ ಪರ ರಾಹುಲ್ ಚಹಾರ್ 131 ವಿಕೆಟ್ ಪಡೆದು ಮಿಂಚಿದರು.

ಬಳಿಕ ಚೆನ್ನೈ ನೀಡಿದ್ದ ಗುರಿ ಬೆನ್ನತ್ತಿದ ರೋಹಿತ್ ಶರ್ಮಾ ಪಡೆಯ ಆರಂಬ ಸಹ ಅಷ್ಟೇನೂ ಉತ್ತಮವಾಗಿರಲಿಲ್ಲ. ನಾಯಕ ರೋಹಿತ್ ಶರ್ಮಾ (2) ಹಾಗೂ ಕ್ವಿಂಟನ್ ಡಿ ಕಾಕ್ (8) ರನ್ ಗಳಿಸಿ ಔಟಾಗುವ ಮೂಲಕ ನಿರಾಶೆ ಮೂಡಿಸಿದ್ದರು.

ಆ ನಂತರ ಬಂದ ಸೂರ್ಯ ಕುಮಾರ್ ಯಾದವ್ (71*)ಹಾಗೂ ಇಶಾನ್ ಕಿಶಾನ್ (28) ಉತ್ತಮ ಜತೆಯಾಟ ತಂಡವನ್ನು ಗೆಲುವಿನತ್ತ ಕೊಂಡೊಯ್ಯಿತು.

ಸೂರ್ಯ ಕುಮಾರ್ ತಾವು 10 ಬೌಂಡರಿ, ನೆರವಿನಿಂದ 54 ಎಸೆತದಲ್ಲಿ 71 ರನ್ ಗಳಿಸಿ ಸಾಧನೆ ತೋರಿದರು. ಇತ್ತ ಇಶಾನ್ ವಿಕೆಟ್ ಒಪ್ಪಿಸಿದ ಬಳಿಕ ಆಗಮಿಸಿದ ಕೃನಾಲ್ ಪಾಂಡ್ಯ ಶೂನ್ಯಕ್ಕೆ ಔಟಾದರೆ ಹಾರ್ದಿಕ್ ಪ್ಂಆಡ್ಯ 11 ಎಸೆತಗಳಿಗೆ 13 ರನ್ ಸಿಡಿಸಿ ಅಜೇಯರಾಗಿ ಉಳಿದರು.

ಚೆನ್ನೈನ ದೀಪಕ್ ಚಹರ್ ಹಾಗೂ ಹರ್ಭಜನ್ ಸಿಂಗ್ ತಲಾ ಒಂದೊಂದು ವಿಕೆಟ್ ಪಡೆದರೆ ಇಮ್ರಾನ್ ತಹೀರ್ 2 ವಿಕೆಟ್ ಕಿತ್ತರು.

ಈ ಗೆಲುವಿನೊಡನೆ ಮುಂಬೈ ಐಪಿಎಲ್ ನಲ್ಲಿ ಐದನೇ ಬಾರಿಗೆ ಫೈನಲ್ ಪ್ರವೇಶಿಸಿ ದಾಖಲೆ ಮಾಡಿದೆ. ಅತ್ತ ಚೆನ್ನೈ ಸಹ ಇನ್ನೊಂದು ಅವಕಾಶ ಪಡೆಯಲಿದ್ದು ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಎಲಿಮಿನೇಟರ್ ವಿಜೇತ ತಂಡವನ್ನು ಎದುರಿಸಬೇಕಿದೆ.

ನಾಳಿನ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಸವಾಲೆಸೆಯಲಿದೆ.

Comments are closed.