ನವದೆಹಲಿ: ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಏಕದಿನ ವಿಶ್ವಕಪ್ ಕ್ರಿಕೆಟ್ 2019ರ ಮೇಲೆ ಮಳೆರಾಯ ದಯೆತೋರುತ್ತಿಲ್ಲವಾದ್ರೂ ಇದರಿಂದಾಗಿ ಮೂರು ಪಂದ್ಯಗಳು ಮಳೆರಾಯನ ಆರ್ಭಟಕ್ಕೆ ತುತ್ತಾಗಿದೆ. ಇದು ಹೀಗೆ ಮುಂದುವರೆದರೆ ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯಗಳ ಏನಾಗಬಹುದು ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಆಂಗ್ಲರ ನಾಡಿನಲ್ಲಿ ಮಳೆಗಾಲ ಬಂದರೆ ಸಾಕು ಈ ಒಂದು ಸಮಸ್ಯೆ ಸಾಮಾನ್ಯವಾದುದ್ದು. ಇದು ವಿಶ್ವಕಪ್ನಲ್ಲೂ ಮುಂದುವರೆಯುತ್ತಿದೆ ಅಷ್ಟೇ. ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯ ಹಾಗೂ ಬಾಂಗ್ಲಾದೇಶ ಮತ್ತು ಶ್ರೀಲಂಕಾ ನಡುವಿನ ಪಂದ್ಯಗಳು ಮಳೆಗೆ ಆಹುತಿ ಆಗಿದೆ.
ಸದ್ಯ ನಾಳೆ ನಡೆಯಲಿರುವ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ಹಾಗೂ ಜೂನ್ 13 ರಂದು ನಡೆಯಲಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯಗಳು ಸಹ ಇದೇ ರೀತಿಯಾಗಿ ಮಳೆಗೆ ಆಹುತಿ ಆದರೆ ಮುಂದೆ ಏನು ಎಂಬ ಪ್ರಶ್ನೆ ಮೂಡಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಸೆಮೀ ಫೈನಲ್ ಹಾಗು ಫೈನಲ್ ಪಂದ್ಯಗಳನ್ನು ಈಗಾಗಲೇ ಕಾಯ್ದಿರಿಸಲಾಗಿದೆ. ಇದೇ ರೀತಿಯಾಗಿ ಮಳೆಗೆ ಕೆಲವು ಪಂದ್ಯಗಳು ಆಹುತಿಯಾಗಿ ಸೆಮೀ ಫೈನಲ್, ಫೈನಲ್ ಪಂದ್ಯಗಳಿಗೆ ಕಾಲಿಡುತ್ತದೆ. ಈ ಲೀಗ್ನಲ್ಲಿ ಅತೀ ಹೆಚ್ಚು ಪಾಯಿಂಟ್ ಪಡೆದ ತಂಡ ಕೊನೆ ಘಟಕ್ಕೆ ತಲುಪುತ್ತವೆ.
ಸೆಮೀ ಫೈನಲ್, ಫೈನಲ್ ನಡೆಯಬೇಕಿದ್ದ ಎರಡು ದಿನವು ಮಳೆರಾಯನಿಗೆ ಪಂದ್ಯಗಳು ಬಲಿಯಾದರೆ ಫೈನಲ್ ಪಂದ್ಯ ತಲುಪಿದ ಎರಡು ತಂಡಗಳು ವಿಶ್ವಕಪ್ ಟ್ರೋಫಿಯನ್ನು ಹಂಚಿಕೊಳ್ಳಬೇಕಾಗುತ್ತದೆ. ಇರದರಲ್ಲಿ ಸೆಮೀ ಫೈನಲ್ ಮತ್ತು ಫೈನಲ್ ಎರಡು ಡ್ರಾ ಆದರೆ ಸೂಪರ್ ಓವರ್ ಆಡಬೇಕಾಗುತ್ತದೆ ಇದರಲ್ಲಿ ಯಾರು ಗೆಲ್ಲುತ್ತಾರೆ ಅವರು ವಿಶ್ವಕಪ್ ವಿಜೇತರಾಗುತ್ತಾರೆ.
ಲೀಗ್ ಪಂದ್ಯಗಳಿಗೆ ಮತ್ತು ಡ್ರಾ ಪಂದ್ಯಗಳ ಸಂದರ್ಭದಲ್ಲಿ ಯಾವುದೇ ಮೀಸಲು ದಿನಗಳನ್ನು ನಿಗದಿಪಡಿಸಲಾಗಿಲ್ಲ. ಎರಡೂ ತಂಡಗಳು ತಲಾ ಒಂದೊಂದು ಅಂಕವನ್ನು ಪಡೆಯುತ್ತವೆ.
Comments are closed.