ಅದು ವೆಸ್ಟ್ ಇಂಡೀಸ್ ಹಾಗೂ ಭಾರತದ ನಡುವಣ ವಿಶ್ವಕಪ್ ಹಣಾಹಣಿ. 27ನೇ ಓವರ್ ಎಸೆಯಲು ಬೂಮ್ರಾ ಬಾಲ್ ಹಿಡಿದಿದ್ದರು. ಅವರ ಮೊದಲನೇ ಎಸೆತ ಎದುರಿಸಲು ಬ್ಯಾಟ್ ಹಿಡಿದು ನಿಂತಿದ್ದು ಬ್ರಾಥ್ವೈಟ್. ಬೂಮ್ರಾ ಬಾಲನ್ನು ಎಸೆಯುತ್ತಿದ್ದಂತೆ ಅದು ಬ್ಯಾಟ್ಗೆ ತಾಗಿ ಕೀಪರ್ನತ್ತ ಸಾಗಿತ್ತು. ಕೀಪರ್ ಎಂಎಸ್ ಧೋನಿ ಅದ್ಭುತವಾಗಿ ಕ್ಯಾಚ್ ಹಿಡಿಯುವ ಮೂಲಕ ಬ್ರಾಥ್ವೈಟ್ರನ್ನು ಪೆವಿಲಿಯನ್ಗೆ ಕಳುಹಿಸಿದ್ದರು.
ಇದಾಗಿದ್ದೇ ತಡ, ಧೋನಿ ಸಾಮಾಜಿಕ ಜಾಲತಾಣದಲ್ಲಿ ಹೀರೋ ಆಗಿಬಿಟ್ಟರು. ಅಷ್ಟು ಕಷ್ಟದ ಕ್ಯಾಚ್ಅನ್ನು ಡೈವ್ ಮಾಡಿ ಸುಲಭವಾಗಿ ಹಿಡಿದಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಯ ಸುರಿಮಳೆಯೇ ಕೇಳಿಬಂದಿದೆ. ಅಷ್ಟೇ ಅಲ್ಲ, ಧೋನಿ ಸಾಮರ್ಥ್ಯವನ್ನು ಎಲ್ಲರೂ ಕೊಂಡಾಡಿದ್ದಾರೆ.
ಈ ಮೊದಲಿನಿಂದಲೂ ಟ್ರೋಲ್ ಆಗುತ್ತಾ ಬಂದಿದ್ದ ಪಾಕ್ ಕ್ಯಾಪ್ಟನ್ ಹಾಗೂ ವಿಕೆಟ್ ಕೀಪರ್ ಸರ್ಫರಾಜ್ ಅಹ್ಮದ್ ಮತ್ತೆ ಮುನ್ನೆಲೆಗೆ ಬಂದಿದ್ದಾರೆ! ಧೋನಿ ಕ್ಯಾಚ್ ಹಿಡಿಯುತ್ತಿದ್ದಂತೆ ಸರ್ಫರಾಜ್ ಅವರನ್ನು ಟ್ರೋಲ್ ಮಾಡಲಾಗಿದೆ. ಇದಕ್ಕೆ ಐಸಿಸಿ ಟ್ವಿಟ್ಟರ್ನಲ್ಲಿ ಹಂಚಿಕೊಂಡ ವಿಡಿಯೋ ಕಾರಣ.
ಈ ಮೊದಲು ಸರ್ಫರಾಜ್ ಕೂಡ ಹೀಗೆಯೇ ಡೈವ್ ಮಾಡಿ ಕ್ಯಾಚ್ ಹಿಡಿದ್ದರು. ಆದರೆ ಅವರು ಅದಕ್ಕೆ ತುಂಬಾ ಪ್ರಯಾಸಪಟ್ಟಂತೆ ಕಾಣುತ್ತಿತ್ತು. ಈ ವಿಡಿಯೋ ಹಾಗೂ ಧೋನಿ ಕ್ಯಾಚ್ ಹಿಡಿದ ವಿಡಿಯೋವನ್ನು ಸೇರಿಸಿ ಟ್ವೀಟ್ ಮಾಡಿದ್ದ ಐಸಿಸಿ ಯಾವುದು ಉತ್ತಮ? ಎನ್ನುವ ಪ್ರಶ್ನೆಯನ್ನು ಮುಂದಿಟ್ಟಿತ್ತು. ಇದಕ್ಕೆ ಧೋನಿ ಎಂದು ಉತ್ತರ ಕೊಟ್ಟಿರುವ ಅನೇಕರು ಸರ್ಫರಾಜ್ ಅವರನ್ನು ಟ್ರೋಲ್ ಮಾಡಿದ್ದಾರೆ.
“ಕ್ಯಾಚ್ ಹಿಡಿಯುವಾಗ ಧೋನಿ ಆಕಸ್ಮಿಕವಾಗಿ ನೆಲಕ್ಕೆ ಬಿದ್ದರು. ಆದರೆ ಸರ್ಫರಾಜ್ ನಿದ್ರೆಯಿಂದ ಕೆಳಗೆ ಬೀಳುವಾಗ ಆಕಸ್ಮಿಕವಾಗಿ ಕ್ಯಾಚ್ ಹಿಡಿದರು” ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಧೋನಿ ಹೀರೋ ಆಗುವುದರ ಜೊತೆಗೆ ಸರ್ಫರಾಜ್ ಭಾರೀ ಟ್ರೋಲ್ ಕೂಡ ಆಗಿದ್ದಾರೆ.
Comments are closed.