ಲಂಡನ್: ವಿಶ್ವದ ಏಕದಿನ ಕ್ರಿಕೆಟ್ ನಲ್ಲಿ ನಂಬರ್ 1 ಬೌಲರ್ ಆಗಿರುವ ಟೀಂ ಇಂಡಿಯಾದ ವೇಗಿ ಜಸ್ ಪ್ರೀತ್ ಬುಮ್ರಾ ಜಾವಗಲ್ ಶ್ರೀನಾಥ್, ಇರ್ಫಾನ್ ಪಠಾಣ್ ದಾಖಲೆಯನ್ನು ಮುರಿದಿದ್ದಾರೆ.
ವಿಶ್ವಕಪ್ ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಜಸ್ ಪ್ರೀತ್ ಬುಮ್ರಾ ಲಂಕಾ ವಿರುದ್ಧದ ಪಂದ್ಯದಲ್ಲಿ 1 ವಿಕೆಟ್ ಪಡೆಯುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ವೇಗವಾಗಿ 100 ವಿಕೆಟ್ ಪಡೆದ 2ನೇ ಭಾರತೀಯ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.
ಏಕದಿನ ಕ್ರಿಕೆಟ್ ನಲ್ಲಿ ವೇಗವಾಗಿ 100 ವಿಕೆಟ್ ಪಡೆದ ಸಾಧನೆ
ಮೊಹಮ್ಮದ್ ಶಮಿ – 56 ಪಂದ್ಯದಲ್ಲಿ 100 ವಿಕೆಟ್
ಜಸ್ ಪ್ರೀತ್ ಬುಮ್ರಾ – 57 ಪಂದ್ಯದಲ್ಲಿ 100 ವಿಕೆಟ್
ಇರ್ಫಾನ್ ಪಠಾಣ್ – 59 ಪಂದ್ಯದಲ್ಲಿ 100 ವಿಕೆಟ್
ಜಹೀರ್ ಖಾನ್ – 65 ಪಂದ್ಯದಲ್ಲಿ 100 ವಿಕೆಟ್
ಅಜಿತ್ ಅಗರ್ಕರ್ – 67 ಪಂದ್ಯದಲ್ಲಿ 100 ವಿಕೆಟ್
ಜಾವಗಲ್ ಶ್ರೀನಾಥ್ – 68 ಪಂದ್ಯದಲ್ಲಿ 100 ವಿಕೆಟ್
Comments are closed.