ಕ್ರೀಡೆ

ವಿಶ್ವಕಪ್​ನಲ್ಲೇ 5 ಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್​​ಮನ್​​​ ರೋಹಿತ್​ ಶರ್ಮ

Pinterest LinkedIn Tumblr


ಲೀಡ್ಸ್​: ಹಿಟ್​​​ಮ್ಯಾನ್​​ ರೋಹಿತ್​ ಶರ್ಮ 2019ನೇ ಐಸಿಸಿ ವಿಶ್ವಕಪ್​​​ನಲ್ಲಿ 5ನೇ ಶತಕ ಸಿಡಿಸಿದರೆ, ಕನ್ನಡಿಗ ಕೆ.ಎಲ್​​ ರಾಹುಲ್​​​ 3ನೇ ಅರ್ಧ ಶತಕ ಸಿಡಿಸಿ ಸಂಭ್ರಮಿಸಿದರು.

ಇಲ್ಲಿನ ಹೇಡಿಂಗ್ಲೆ ಕ್ರೀಡಾಂಗಣದಲ್ಲಿ ಲಂಕಾ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡ ಉತ್ತಮ ಆಟವಾಡುವಲ್ಲಿ ಯಶಸ್ವಿಯಾಯಿತು. ಆರಂಭಿಕರಾಗಿ ಕ್ರೀಸ್​ಗೆ ಆಗಮಿಸಿದ ರಾಹುಲ್​​​​​​​​ ಹಾಗೂ ರೋಹಿತ್​​​​​​​ ಉತ್ತಮ ಜತೆಯಾಟದೊಂದಿಗೆ ತಂಡಕ್ಕೆ ಬೃಹತ್​ ಮೊತ್ತದ ಕೊಡುಗೆ ನೀಡಿದರು. ರೋಹಿತ್​​ ಎದುರಿಸಿದ 92 ಎಸೆತಗಳಲ್ಲಿ 02 ಸಿಕ್ಸರ್​ ಹಾಗೂ14 ಬೌಂಡರಿಗಳೊಂದಿಗೆ 102 ರನ್​ ಗಳಿಸುವ ಮೂಲಕ ಏಕದಿನ ವೃತ್ತಿ ಜೀವನದಲ್ಲಿ 27ನೇ ಶತಕ ಸಿಡಿಸಿ ಸಂಭ್ರಮಿಸಿದರು. ಈ ಮೂಲಕ ವಿಶ್ವಕಪ್​ ಟೂರ್ನಿಯೊಂದರಲ್ಲಿ 5 ಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್​ಮನ್​ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ರಾಹುಲ್​​​​ 82 ಎಸೆತಗಳಲ್ಲಿ 1 ಸಿಕ್ಸರ್​​ ಹಾಗೂ 8 ಬೌಂಡರಿಗಳೊಂದಿಗೆ ಅರ್ಧ ಶತಕ (76) ಸಿಡಿಸುವ ಮೂಲಕ ರೋಹಿತ್​​ಗೆ ಸಾಥ್​ ನೀಡಿದರು. ಒಂದು ವೇಳೆ ಇಬ್ಬರು ಬ್ಯಾಟ್ಸ್​ಮನ್​ಗಳು ವಿಕೆಟ್​ ಕಳೆದುಕೊಳ್ಳದೇ ಉತ್ತಮ ಬ್ಯಾಟಿಂಗ್​​ ಮಾಡಿ ತಂಡವನ್ನು ಗೆಲ್ಲಿಸಿದರೆ, ವಿಶ್ವಕಪ್​ನಲ್ಲಿ ದಾಖಲೆ ನಿರ್ಮಾಣವಾಗಲಿದೆ.

ಲಂಕಾ ಪರ ಲಸಿತ್​ ಮಲಿಂಗಾ, ಕಸುನ್​​​​​​ ರಜಿತಾ, ಇಸ್ರು ಉಡಾನ, ಥಿಸಾರ ಪೆರೆರಾ ಹಾಗೂ ಧನಂಜಯ ಡಿ ಸಿಲ್ವಾ ಬೌಲಿಂಗ್​​​​ ಮಾಡುತ್ತಿದ್ದಾರೆ

Comments are closed.