ಕ್ರೀಡೆ

ಸೆಮಿಫೈನಲ್​ ಸೋಲಿನ ಬೆನ್ನಲ್ಲೆ – ಕೊಹ್ಲಿ, ರವಿಶಾಸ್ತ್ರಿಗೆ ಕಂಟಕ

Pinterest LinkedIn Tumblr


ಐಸಿಸಿ ಕ್ರಿಕೆಟ್ ವಿಶ್ವಕಪ್ 2019ರ ಅಭಿಯಾನ ವಿಫಲವಾದ ಹಿನ್ನೆಲೆಯಲ್ಲಿ ಪ್ರಶ್ನೆಗಳಿಗೆ ಉತ್ತರಿಸಲು ಭಾರತೀಯ ತಂಡ ನಾಯಕ ವಿರಾಟ್ ಕೊಹ್ಲಿ ಮತ್ತು ಮುಖ್ಯ ಕೋಚ್ ರವಿಶಾಸ್ತ್ರಿ ಅವರು ಆಡಳಿತಾಧಿಕಾರಿಗಳ ಸಮಿತಿಯ ಮುಂದೆ ಹಾಜರಾಗಲಿದ್ದಾರೆ. ಇಡೀ ಟೂರ್ನಿಯಲ್ಲಿ ಎಲ್ಲರೂ ಮೆಚ್ಚುವಂತ ತಂಡವೆನಿಸಿದ್ದರೂ ಸಹ ಸೆಮಿಫೈನಲ್​​ನಲ್ಲಿ ಮಾತ್ರ ಟೀಂ ಇಂಡಿಯಾ ತನ್ನ ಅಂತ್ಯ ಕಂಡಿತು.

ಪಿಟಿಐ ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ಆಡಳಿತಾಧಿಕಾರಿ ಸಮಿತಿಯ ಮುಖ್ಯಸ್ಥ ವಿನೋದ್​ ರೈ, ಸದ್ಯ ನಡೆಯಬೇಕಿದ್ದ ಸಭೆಯನ್ನು ನಾವು ಮುಂದೂಡುತ್ತಿದ್ದೇವೆ ಎಂದು ಅವರು ಹೇಳಿದ್ದು, ನಾವು ಕೋಚ್ ರವಿಶಾಸ್ತ್ರೀ ಮತ್ತು ತಂಡದ ನಾಯಕ ವಿರಾಟ್​ ಕೊಹ್ಲಿ ಜೊತೆ ಆತ್ಮಾವಲೋಕನ ಸಭೆ ನಡೆಸಲಿದ್ದು ಈ ಸಭೆಗೆ ಒಂದು ನಿಗದಿತವಾದ ಸಮಯ ನೀಡಿ ಬಳಿಕ ತಂಡವು ಸೆಮಿಫೈನಲ್​​ ಹಂತದಲ್ಲಿ ಎಡವಿದ ಬಗ್ಗೆ ವಿವಿಧ ಆಯಾಮಗಳಲ್ಲಿ ಚರ್ಚೆ ನಡೆಸಿ ಆಯ್ಕೆ ಸಮಿತಿ ಗಮನಕ್ಕೆ ತರುತ್ತೇವೆ ಎಂದು ಅವರು ಹೇಳಿದ್ದಾರೆ.

ಸದ್ಯ ಟೀಂ ಇಂಡಿಯಾ ವಿಶ್ವಕಪ್​ನಿಂದ ಹೊರಬಿದ್ದಿದೆ ಇದರ ಬಗ್ಗೆ ಹೆಚ್ಚೇನು ಕೇಳಬೇಡಿ ಇದಕ್ಕೆ ನಮ್ಮ ಬಳಿ ಉತ್ತರವಿಲ್ಲ ಎಂದು ಅವರು ಹೇಳಿದರು.

ಈ ವಿಶ್ವಕಪ್​​ನಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ತೋರಿದೆ ಆದರೆ ನ್ಯೂಜಿಲೆಂಡ್​ ವಿರುದ್ಧದ ಸೆಮಿಫೈನಲ್​ ಪಂದ್ಯದಲ್ಲಿ ಕೊಂಚ ಎಚ್ಚರ ತಪ್ಪಿದ ಪರಿಣಾಮ ಕಿವೀಸ್​ ಸತತವಾಗಿ ಎರಡನೇ ಬಾರಿಗೆ ವಿಶ್ವಕಪ್​ ಫೈನಲ್​ ಹಂತ ತಲುಪಲು ಸಾಧ್ಯವಾಗಿದೆ.
ಈ ಸಲ ವಿಶ್ವಕಪ್​​ನಲ್ಲಿ ಟೀಂ ಇಂಡಿಯಾದ ಆಟಗಾರರ ಗಾಯದ ಸಮಸ್ಯೆ ಜೊತೆ ಫಾರ್ಮ್​​ ಬಗ್ಗಯೂ ಮುಂದಿನ ನಡೆಯುವ ಸಭೆಲ್ಲಿ ವಿಶೇಷವಾಗಿ ಚರ್ಚೆ ನಡೆಸುವ ಸಾಧ್ಯತೆಯಿದೆ.

ಸದ್ಯ ಟೀಂ ಇಂಡಿಯಾ ಮುಂದಿನ ವರ್ಷ ನಡೆಯುವ ಟಿ-20 ವಿಶ್ವಕಪ್​ಗೆ ತಯಾರು ನಡೆಸಲಿದ್ದು ಇದಕ್ಕೂ ಮುಂಚೆ ವೆಸ್ಟ್​ ಇಂಡೀಸ್​ ವಿರುದ್ಧ ನಡೆಯುವ ಸರಣಿಯಲ್ಲಿ ಭಾರತ ತಂಡ ಆಡಲಿದೆ.

Comments are closed.