ಮುಂಬೈ: ಐಸಿಸಿ ವಿಶ್ವಕಪ್ ನಲ್ಲಿ ಇಂಗ್ಲೆಂಡ್ ಗೆದ್ದ ರೀತಿ ಹಾಗೂ ಐಸಿಸ್ಯ ಬೌಂಡರಿ ನಿಯಮಗಳ ಕುರಿತಂತೆ ಇದಾಗಲೇ ಕ್ರಿಕೆಟ್ ಲೋಕದ ದಿಗ್ಗಜರು ಅಸಮಾಧಾನ ವ್ಯಕ್ತಪಡಿಸಿರುವುದು ತಿಳಿದಿದೆ. ಇದೀಗ ಭಾಲಿವುಡ್ ಬಿಗ್ ಅಮಿತಾಬ್ ಬಚ್ಚನ್ ಸಹ ಕಿಡಿಕಾರಿದ್ದಾರೆ.
ಐಸಿಸಿ ಬೌಂಡರಿ ನಿಯಮಾವಳಿಯ ಕುರಿತಂತೆ ಟ್ವೀಟ್ ಮಾಡಿರುವ ನಟ ಅಮಿತಾಬ್ 2,000 ರು. ನೋಟಿನ ಉದಾಹರಣೆಯೊಡನೆ ಅದನ್ನು ಟ್ರೋಲ್ ಮಾಡಿದ್ದಾರೆ.
ನಿಮ್ಮ ಬಳಿ 2,000 ರು ಇದೆ, ಹಾಗೆಯೇ ನನ್ನ ಬಳಿಯೂ 2,000 ರು. ಇದೆ. ಆದರೆ ನಿಮ್ಮ ಬಳಿ 2,000 ರು. ಒಂದು ನೋಟಿದ್ದರೆ ನನ್ನ ಬಳಿ 500 ರು. ನಾಲ್ಕು ನೋಟು ಇದೆ ಎಂದುಕೊಳ್ಳಿ. ಆದರೆ ಈಗ ಯಾರು ಶ್ರೀಮಂತರಾಗುತ್ತಾರೆ? ಐಸಿಸಿ ಪ್ರಕಾರ 500 ರು. ನಾಲ್ಕು ನೋಟಿರುವ ನಾನು ಶ್ರೀಮಂತನಾಗುತ್ತೇನೆ – ಅಮಿತಾಬ್ ಟ್ವೀಟ್ ಮಾಡಿದ್ದಾರೆ.
ನಟ, ರಾಜಕಾರಣಿ ಪರೇಶ್ ರಾವಲ್ ಸಹ ಈ ಬಗ್ಗೆ ಮಾತನಾಡಿದ್ದು ಎಂ.ಎಸ್. ಧೋನಿಗೆ ಗ್ಲೌಸ್ ಬದಲಿಸುವಂತೆ ಸೂಚಿಸಿದ್ದ ಐಸಿಸ್ ಮೊದಲಿಗೆ ತನ್ನ ಸೂಪ ಓವರ್ ನಿಯಮಾವಳಿಯನ್ನು ಬದಲಿಸಬೇಕಿದೆ ಎಂದು ಒತ್ತಾಯಿಸಿದ್ದಾರೆ.
ಭಾನುವಾರ ದಿ ಲಾರ್ಡ್ಸ್ ಅಂಗಳದಲ್ಲಿ ನಡೆದ ವಿಶ್ವಕಪ್ ಫೈನಲ್ಸ್ ನಲ್ಲಿ ಇಂಗ್ಲೆಂಡ್-ನ್ಯೂಜಿಲ್ಯಾಂಡ್ ಹಣಾಹಣಿ ನಡೆದಿತ್ತು. ಅದಲ್ಲಿ ಮೊದಲು ಬ್ಯಾಟ್ ಮಾಡಿದ್ದ ನ್ಯೂಜಿಲ್ಯಾಂಡ್ ಎಂಟು ವಿಕೆಟ್ ನಷ್ಟಕ್ಕೆ 241 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ್ದ ಇಂಗ್ಲೆಂಡ್ ತಾನೂ 241 ರನ್ ಗಳಿಸಿ ಆಲೌಟ್ ಆಗಿತ್ತು. ಪಂದ್ಯ ಟೈ ಆಗಿದ್ದ ಕಾರಣ ತೆ ಸೂಪರ್ ಓವರ್ ಆಡಿಸಲು ತೀರ್ಮಾನ ಮಾಡಲಾಗಿ ಅಲ್ಲಿಯೂ ಎರಡೂ ತಂಡಗಳು 15 ರನ್ ಗಳಿಸಿದ್ದವು. ಆಗ ಸೂಪರ್ ಓವರ್ ಸಹ ಟೈ ಆಗಿದೆ.ಇದೀಗ ಐಸಿಸಿ ನಿಯಮಾವಳಿಯಂತೆ ಯಾವ ತಂಡ ಹೆಚ್ಚು ಬೌಂಡರಿ ಬಾರಿಸಿದೆಯೋ ಅದೇ ತಂಡವನ್ನು ವಿಜಯಿ ಎಂದು ಘೋಷಿಸಲಾಗಿದೆ.
Comments are closed.