ಮುಂಬೈ: ವಿಶ್ವಕಪ್ ಟೂರ್ನಿಯಿಂದ ಭಾರತ ಹೊರಬಿದ್ದ ಬೆನ್ನಲ್ಲೇ ತಂಡದಲ್ಲಿ ಏನು ಸರಿಯಿಲ್ಲ ಎಂಬಂತಾಗಿದೆ. ಹೌದು ಸ್ಟಾರ್ ಬ್ಯಾಟ್ಸ್ ಮನ್ ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದ್ದು ಇದರಿಂದ ಟೀಂ ಇಂಡಿಯಾ ಇಬ್ಬಾಗವಾದಂತಾಗಿದೆ.
ಕೆಲವರು ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಪ್ರಶ್ನೆ ಮಾಡುತ್ತಿದ್ದರೆ ಇತ್ತ ಕೆಲವರು ರೋಹಿತ್ ಶರ್ಮಾಗೆ ನಾಯಕತ್ವ ವಹಿಸಿ ಎಂದು ಹೇಳುತ್ತಿದ್ದಾರೆ. ಇದರಿಂದಾಗಿ ಟೀಂ ಇಂಡಿಯಾ ಈಗ ಎರಡು ಭಾಗವಾಗಿದೆ.
ಇನ್ನು ತಂಡದಲ್ಲಿನ ಸ್ಟಾರ್ ಬ್ಯಾಟ್ಸ್ ಮನ್ ಗಳ ಮೈಮನಸ್ಯವನ್ನು ತಿಳಿದ ಬಿಸಿಸಿಐ ಸೂತ್ರವೊಂದನ್ನು ಹೆಣೆಯುತ್ತಿದೆ. ಇಬ್ಬರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಲು ಮುಂದಾಗಿದ್ದು ಈ ಹಿನ್ನೆಲೆಯಲ್ಲಿ ಕೆಲ ಪಂದ್ಯಗಳಿಗೆ ವಿರಾಟ್ ಕೊಹ್ಲಿ ಬದಲಿಗೆ ರೋಹಿತ್ ಶರ್ಮಾಗೆ ನಾಯಕತ್ವ ವಹಿಸು ಚಿಂತನೆ ನಡೆಸಿದೆ.
ಇನ್ನು ವಿಶ್ವಕಪ್ ರಿವ್ಯೂ ಮೀಟಿಂಗ್ ನಲ್ಲಿ ಕೋಚ್ ರವಿಶಾಸ್ತ್ರಿ ಮತ್ತು ವಿರಾಟ್ ಕೊಹ್ಲಿ ಎದುರೂ ಬಿಸಿಸಿಐ ಆಡಳಿತ ಮಂಡಳಿ ಈ ಪ್ರಸ್ತಾಪವನ್ನಿಡುವ ಸಾಧ್ಯತೆ ಇದೆ. ಹೀಗಾಗಿ ಮುಂದೊಂದು ದಿನ ಟೀಂ ಇಂಡಿಯಾಗೆ ಇಬ್ಬುರ ನಾಯಕರಾದರೂ ಅಚ್ಚರಿಯಿಲ್ಲ
Comments are closed.