ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್)ನಲ್ಲಿ ನಾಯಕನ ಸ್ಥಾನದಲ್ಲಿದ್ದೂ ಮಂಕಡ್ ರನೌಟ್ ಮಾಡಿ ಟೀಕೆಗೆ ಗುರಿಯಾಗಿದ್ದ ರವಿಚಂದ್ರನ್ ಅಶ್ವಿನ್ ಇದೀಗ ಟಿಎನ್‌ಪಿಎಲ್ ನಲ್ಲಿ ವಿಚಿತ್ರ ರೀತಿಯಲ್ಲಿ ಬೌಲಿಂಗ್ ಮಾಡಿ ವಿಕೆಟ್ ಪಡೆದು ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
https://twitter.com/SriniMaama16/status/1153360508566659072
ತಮಿಳುನಾಡು ಪ್ರಿಮಿಯರ್ ಲೀಗ್ (ಟಿಎನ್‌ಪಿಎಲ್)ನಲ್ಲಿ ದಿಂಡಗಲ್ ಡ್ರಾಗನ್ಸ್ ಮತ್ತು ಮಧುರೈ ಪ್ಯಾಂಥರ್ಸ್ ನಡುವಿನ ಪಂದ್ಯ ಹಿಂದೆದೂ ಕಾಣದಂತ ಎಸೆತಕ್ಕೆ ಸಾಕ್ಷಿಯಾಗಿದೆ.
ದಿಂಡಗಲ್ ಡ್ರ್ಯಾಗನ್ಸ್ ವಿರುದ್ಧ ಗೆಲ್ಲಲು ಮಧುರೈ ತಂಡಕ್ಕೆ ಕೊನೆಯ ಓವರ್ ನಲ್ಲಿ 32 ರನ್ ಗಳನ್ನು ಪೇರಿಸಿಬೇಕಿತ್ತು. ಈ ವೇಳೆ ದಿಂಡಗಲ್ ಪರ ಕೊನೆಯ ಓವರ್ ಬೌಲಿಂಗ್ ಮಾಡಿದ ಆರ್ ಅಶ್ವಿನ್ ಕೇವಲ 2 ರನ್ ನೀಡಿ 2 ವಿಕೆಟ್ ಪಡೆದು ತಂಡಕ್ಕೆ ಗೆಲುವು ತಂದುಕೊಟ್ಟರು.
ಆದರೆ ಇದೇ ಓವರ್ ನಲ್ಲಿ ತಮ್ಮ ಬೌಲಿಂಗ್ ಶೈಲಿಯನ್ನು ಬಿಟ್ಟು ಚಿಕ್ಕ ಮಕ್ಕಳು ಚೆಂಡನ್ನು ಎಸೆಯುವಂತೆ ಬೌಲಿಂಗ್ ಮಾಡಿ ಎಲ್ ಕೆ ಆಕಾಶ್ ವಿಕೆಟ್ ಪಡೆದಿದ್ದು ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.
Comments are closed.