ಕರ್ನಾಟಕ

ಆಪ್ ಮೂಲಕ ಕ್ರಿಕೆಟ್ ಬೆಟ್ಟಿಂಗ್: ಬೆಂಗಳೂರಿನಲ್ಲಿ ಇಬ್ಬರು ಬುಕ್ಕಿಗಳು ಸೆರೆ: 40 ಲಕ್ಷ ವಶ

Pinterest LinkedIn Tumblr

ಬೆಂಗಳೂರು: ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಬಹುದೊಡ್ಡ ಜಾಲವನ್ನು ಬೆಂಗಳೂರು ಕೇಂದ್ರೀಯ ಅಪರಾಧ ದಳ (ಸಿಸಿಬಿ) ಪೊಲೀಸರು ಬೇಧಿಸಿದ್ದು, ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಬೆಂಗಳೂರು ಹಲಸೂರು ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ನಗರ್ತಪೇಟೆ ಪಿ.ಆರ್. ಶಾಸ್ತ್ರಿ ಲೇನ್ ಎಂಬಲ್ಲಿ ಈ ಘಟನೆ ನಡೆದಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಟಿ20 ಪಂದ್ಯದ ವೇಳೆ ಬೆಟ್ಟಿಂಗ್ ನಲ್ಲಿ ತೊಡಗಿದ್ದರೆನ್ನಲಾದ ಇಬ್ಬರು ಆರೋಪಿಗಳು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರು ನಗರ್ತಪೇಟೆ ನಿವಾಸಿ ರಾಣಾ ಸಾಮಾ (35), ರಾಜಾಜಿನಗರ ನಿವಾಸಿ ಸಂದೀಪ್ ಪೂಜಾರ್(39) ಬಂಧಿತ ಆರೋಪಿಗಳು.

ಬೆಟ್ಟಿಂಗ್ ಕುರಿತು ಸಾರ್ವಜನಿಕರು ನೀಡಿದ್ದ ಮಾಹಿತಿ ಆಧರಿಸಿ ದಾಳಿ ನಡೆಸಿರುವ ಪೊಲೀಸರು ಇಬ್ಬರು ಬುಕ್ಕಿಗಳನ್ನು ಬಂಧಿಸಿದ್ದಾರೆ. ಅಂತೆಯೇ ಬಂಧಿತರಿಂದ ಸುಮಾರು 40 ಲಕ್ಷ ರೂ ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಬೆಟ್ಟಿಂಗಿನಲ್ಲಿ ಗೆದ್ದವರಿಗೆ ಹಣ ಕೊಡದೆಯೂ ಮೋಸ ಮಾಡುತ್ತಿದ್ದರು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.

ಈ ಕಾರ್ಯಾಚರಣೆಯಲ್ಲಿ ಅಪರಾಧ ವಿಭಾಗದ ಬೆಂಗಳೂರು ನಗರ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಉಪ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್. ಜೈನ್ ಮಾರ್ಗದರ್ಶನದಲ್ಲಿ ಸಿಸಿಬಿ, ವಿಶೇಶ ವಿಚಾರಣಾ ದಳದ ಸಹಾಯಕ ಪೊಲೀಸ್ ಆಯುಕ್ತ ಎನ್. ಎಚ್. ರಾಮಚಂದ್ರಯ್ಯ, ಸಿಸಿಬಿ ಸಂಘಟಿತ ಅಪರಾಧ ದಳದ ಸಹಾಯಕ ಪೊಲೀಸ್ ಆಯುಕ್ತ ನಾಗರಾಜು ನೇತೃತ್ವದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ರವಿ ಪಾಟೀಲ್, ಮುರುಗೇಂದ್ರಯ್ಯ, ಎಂ.ಆರ್. ಹರೀಶ್, ಸಿಬ್ಬಂದಿಗಳಾದ ಧನಂಜಯ, ಹನುಮೇಶಿ, ರವಿಕುಮಾರ್, ವಿನೋದ್ ಕುಮಾರ್ ಹಾಗೂ ನಾಗರಾಜ್ ಮೊದಲಾದವರಿದ್ದರು.

Comments are closed.