ಕೇಪ್ ಟೌನ್: ಆತ ನನ್ನ ತಂಗಿಯ ಜೊತೆಗೆ ಮಲಗಿದ್ದ, ಅದಕ್ಕಾಗಿಯೇ ತಂಡದಿಂದ ಕೈಬಿಟ್ಟೆ ಎಂದು ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿಸ್ ಹೇಳಿದ್ದಾರೆ. ಅಷ್ಟಕ್ಕೂ ಅವರು ಹೇಳಿರುವುದು ಹರ್ಡಸ್ ವಿಲ್ಜೋಯಿನ್ ಕುರಿತು.
ದಕ್ಷಿಣ ಆಫ್ರಿಕಾದ ಮಂಝಿ ಸೂಪರ್ ಲೀಗ್ ನಲ್ಲಿ ಪಾರ್ಲ್ ರಾಕ್ಸ್ ತಂಡದ ನಾಯಕನಾಗಿರುವ ಪ್ಲೆಸಿಸ್ ಆಡುವ ಬಳಗದಲ್ಲಿ ಹರ್ಡಸ್ ವಿಲ್ಜೋಯಿನ್ ಅವರನ್ನು ಕೈಬಿಟ್ಟಿದ್ದಕ್ಕೆ ಕಾರಣ ಹೇಳುತ್ತಾ ಈ ಮಾತನ್ನು ಹೇಳಿದರು.
ವಿಜ್ಲೋಯಿನ್ ಮತ್ತು ನನ್ನ ತಂಗಿಗೆ ನಿನ್ನೆ ಮದುವೆಯಾಗಿದೆ. ಹಾಗಾಗಿ ಅವನು ನನ್ನ ತಂಗಿಯ ಜೊತೆಗಿದ್ದಾನೆ. ಆ ಕಾರಣದಿಂದ ಅವನು ಆಡುವ ಬಳಗದಲ್ಲಿಲ್ಲ ಎಂದು ಡುಪ್ಲೆಸಿಸ್ ಹೇಳಿದ್ದಾರೆ.
ಬಲಗೈ ವೆಗಿಯಾಗಿರುವ ಹರ್ಡಸ್ ವಿಲ್ಜೋಯಿನ್ ಕಿಂಗ್ಸ್ ಇಲೆವೆನ್ ಪಂಜಾಬ್ ಪರವಾಗಿಯೂ ಆಡಿದ್ದರು.
Comments are closed.