ನವದೆಹಲಿ: ಕ್ರಿಕೆಟ್ ಟೀಂ ಇಂಡಿಯಾ ಆಟಗಾರರ ಸಿಕ್ಸ್ ಪ್ಯಾಕ್ ಫೋಟೋಗೆ ಮಹಿಳಾ ಅಭಿಮಾನಿಗಳು ಫಿದಾ ಆಗಿದ್ದು, ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಮಿಂಚಿನಂತೆ ಸುಳಿದಾಡುತ್ತಿದೆ.
ಯಜುವೇಂದ್ರ ಚಹಲ್ ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಸಹ ಆಟಗಾರರೊಂದಿಗೆ ಪೋಸ್ ನೀಡಿರುವ ಫೋಟೋವನ್ನ ಅಪ್ಲೋಡ್ ಮಾಡಿಕೊಂಡಿದ್ದಾರೆ. ಟೀ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಫಿಟ್ನೆಸ್ ಮೂಲಕ ಇತರ ಆಟಗಾರರಿಗೆ ಮಾದರಿಯಾಗಿದ್ದಾರೆ. ಉಳಿದಂತೆ ಸಹ ಆಟಗಾರರು ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳಲು ಆಟದೊಂದಿಗೆ ಜಿಮ್ ನಲ್ಲಿಯೂ ಸಮಯ ಕಳೆಯುತ್ತಿದ್ದಾರೆ. ಮೊದಲಿಗೆ ಒಬ್ಬರೇ ತಮ್ಮ ಸಿಕ್ಸ್ ಪ್ಯಾಕ್ ಮತ್ತು ಆ್ಯಬ್ಸ್ ತೋರಿಸುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದರು.
ಚಹಲ್ ಅಪ್ಲೋಡ್ ಮಾಡಿಕೊಂಡಿರುವ ಫೋಟೋದಲ್ಲಿ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ ಮತ್ತು ನವದೀಪ್ ಸೈನಿರನ್ನು ಕಾಣಬಹುದು. ದೊಡ್ಡ ಕನ್ನಡಿ ಮುಂದೆ ನಿಂತು ಎಲ್ಲರೂ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಫೋಟೋ ಇದುವರೆಗೂ 2 ಲಕ್ಷಕ್ಕೂ ಅಧಿಕ ಲೈಕ್ ಪಡೆದುಕೊಂಡಿದೆ.
Comments are closed.