ಹೊಸದಿಲ್ಲಿ: ಸ್ಟಾರ್ ಸ್ಪೋರ್ಟ್ಸ್ ನಿರೂಪಕಿ ಮಯಾಂತಿ ಲ್ಯಾಂಗರ್ ದೇಶದ ಅತಿ ಬೇಡಿಕೆಯ ಕ್ರೀಡಾ ನಿರೂಪಕಿಗಳಲ್ಲಿ ಒಬ್ಬರಾಗಿದ್ದಾರೆ. ಇದೀಗ ಪತ್ನಿ ಸ್ಟುವರ್ಟ್ ಬಿನ್ನಿ ಬಗ್ಗೆ ಪ್ರಶ್ನೆಯನ್ನು ಕೇಳಿ ಕೆಣಕಲು ಬಂದ ಅಭಿಮಾನಿಗೆ ತಕ್ಕ ಪ್ರತ್ಯುತ್ತರ ನೀಡುವ ಮೂಲಕ ಗಮನ ಸೆಳೆದಿದ್ದಾರೆ.
ಮಯಾಂತಿ ಲ್ಯಾಂಗರ್ ತನ್ನ ಟ್ವಿಟರ್ ಪುಟದಲ್ಲಿ ಚಿತ್ರವೊಂದನ್ನು ಹಂಚಿದ್ದರು. ಇದಕ್ಕೆ ಸ್ಟುಡಿಯೋದಲ್ಲಿ ಕಲರ್‍ಫುಲ್ ಲೈಫ್ ಎಂಬ ಕ್ಯಾಪ್ಷನ್ ಕೊಟ್ಟಿದ್ದರು. ಈ ಸಂದರ್ಭದಲ್ಲಿ ಅಭಿಮಾನಿಯೊಬ್ಬ, ಇತ್ತೀಚೆಗಿನ ದಿನಗಳಲ್ಲಿ ಸ್ಟುವರ್ಟ್ ಬಿನ್ನಿ ಎಲ್ಲಿದ್ದಾರೆ ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಯಾಗಿ ಮಗದೋರ್ವ ಅಭಿಮಾನಿ ‘ಆತ (ಸ್ಟುವರ್ಟ್ ಬಿನ್ನಿ) ಬ್ಯಾಗ್‌ಗಳನ್ನು ಸಾಗಿಸಲು ಅವಳಿಗೆ (ಮಯಾಂತಿ ಲ್ಯಾಂಗರ್‌ಗೆ) ಸಹಾಯ ಮಾಡುತ್ತಿದ್ದಾನೆ ಎಂದು ವ್ಯಂಗ್ಯ’ ಮಾಡಿದ್ದರು.
ಇದಕ್ಕೆ ಮಯಾಂತಿ ಖಡಕ್ ಜವಾಬ್ ನೀಡಿದ್ದಾರೆ. ‘ನನ್ನ ಬ್ಯಾಗ್‌ಗಳನ್ನು ನಾನೇ ಕೊಂಡೊಯ್ಯಬಲ್ಲೆ. ಥ್ಯಾಂಕ್ಯೂ ವೆರಿ ಮಚ್. ಅವರು (ಸ್ಟುವರ್ಟ್ ಬಿನ್ನಿ) ಅವರ ಬದುಕಿನಲ್ಲಿ ನಿರತವಾಗಿದ್ದಾರೆ. ಕ್ರಿಕೆಟ್ ಆಡುತ್ತಿದ್ದಾನೆ. ಒಟ್ಟಾರೆಯಾಗಿ ಅದ್ಭುತ. ಹಾಗೆಯೇ ಅವನಿಗೆ ಗೊತ್ತಿಲ್ಲದ ಜನರ ಬಗ್ಗೆ ಕಾಮೆಂಟ್ ಮಾಡುವುದಿಲ್ಲ’ ಎಂದು ಉತ್ತರಿಸಿದ್ದಾರೆ.
ಮಯಾಂತಿ ಲ್ಯಾಂಗರ್ ಪ್ರತಿಕ್ರಿಯೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ವ್ಯಕ್ತಿಗಳ ಖಾಸಗಿ ಬದುಕಿನ ವಿಷಯಗಳ ಬಗ್ಗೆ ಮೂಗು ತೂರಿಸುವವರಿಗೆ ಇಂತಹ ಉತ್ತರ ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
35ರ ಹರೆಯದ ಸ್ಟುವರ್ಟ್ ಭಿನ್ನಿ ಭಾರತ ತಂಡವನ್ನು ಆರು ಟೆಸ್ಟ್, 14 ಏಕದಿನ ಮತ್ತು ಮೂರು ಟ್ವೆಂಟಿ-20 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಕೊನೆಯದಾಗಿ 2016ರಲ್ಲಿ ವೆಸ್ಟ್‌ಇಂಡೀಸ್ ಟಿ20 ಪಂದ್ಯವನ್ನು ಆಡಿದ್ದರು. ಇನ್ನು ರಣಜಿ ಟ್ರೋಫಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. ಹಾಗೆಯೇ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಜಸ್ಥಾನ ರಾಯಲ್ಸ್, ಬೆಂಗಳೂರು ರಾಯಲ್ಸ್, ಮುಂಬಯಿ ಇಂಡಿಯನ್ಸ್ ತಂಡಗಳನ್ನು ಪ್ರತಿನಿಧಿಸಿದ್ದಾರೆ. ಕೊನೆಯದಾಗಿ 2018ರಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡಿದ್ದರು.
Comments are closed.