ಉಡುಪಿ: ರಾಜ್ಯಮಟ್ಟದ ಪ್ರಸಿದ್ಧ ಕ್ರಿಕೆಟ್ ಆಟಗಾರ ಆಟವಾಡುತಿದ್ದಾಗಲೇ ಮೈದಾನದಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ತುಮಕೂರಿನಲ್ಲಿ ಶುಕ್ರವಾರ ನಡೆದಿದೆ. ಕಾಪು ಸಮೀಪದ ಪಾಂಗಾಳ ನಿವಾಸಿ ಪ್ರಶಾಂತ್ ಕುಮಾರ್ (32) ಮೃತ ದುರ್ದೈವಿ.
ಪ್ರತಿಭಾವಂತ ಕ್ರಿಕೆಟ್ ಆಟಗಾರನಾಗಿದ್ದ ಪ್ರಶಾಂತ್, ಟೆನ್ನಿಸ್ ಬಾಲ್ ಟೂರ್ನ್ ಮೆಂಟ್ ಗಳಲ್ಲಿ ಹಲವು ಪಂದ್ಯಗಳನ್ನಾಡಿದ್ದು, ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್ ಎಲ್ಲದರಲ್ಲಿಯೂ ಸೈ ಅನಿಸಿಕೊಂಡು ಆಲ್ ರೌಂಡರ್ ಆಗಿದ್ದರು. ಪ್ರಶಾಂತ್ ಬೆಂಗಳುರಿನಲ್ಲಿ ಉದ್ಯೋಗದಲ್ಲಿದ್ದರು.
ಶುಕ್ರವಾರ ನಡೆಯುತ್ತಿದ್ದ ಪಂದ್ಯದಲ್ಲಿಯೂ ಕೂಡ ಎರಡು ಸಿಕ್ಸರ್ ಬಾರಿಸಿದ್ದು ಮೈದಾನದಲ್ಲಿಯೇ ಕುಸಿದು ಬಿದ್ದಿದ್ದರು. ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಕೂಡ ಅಷ್ಟರಲ್ಲಿ ಮೃತಪಟ್ಟಿದ್ದಾರೆ.
Comments are closed.