ಇಸ್ಲಾಮಾಬಾದ್: ಕೊರೋನಾ ವೈರಸ್ ಮಾಹಾಮಾರಿಗೆ ಪಾಕಿಸ್ತಾನ ನಲುಗಿ ಹೋಗಿದೆ. ಇನ್ನು ಕೊರೋನಾ ವಿರುದ್ಧದ ಹೋರಾಟಕ್ಕಾಗಿ ಪಾಕ್ ಟೆಸ್ಟ್ ತಂಡದ ನಾಯಕ ಹರಾಜಿಗಿಟ್ಟಿದ್ದ ಬ್ಯಾಟ್ ಮತ್ತು ಜೆರ್ಸಿಯನ್ನು ಭಾರತದ ಕಂಪನಿಯೊಂದು ಖರೀದಿಸಿದೆ.
ಪುಣೆ ಮೂಲದ ಬ್ಲೇಡ್ಸ್ ಆಫ್ ಗ್ಲೋರಿ ಕ್ರಿಕೆಟ್ ಮ್ಯೂಸಿಯಂ ಅಜರ್ ಅಲಿಯ ಬ್ಯಾಟ್ ಮತ್ತು ಜೆರ್ಸಿಯನ್ನು 7 ಕೋಟಿ ರುಪಾಯಿ ನೀಡಿ ಖರೀದಿಸಿದೆ.
2016ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ 302 ರನ್ ಗಳಿಸಲು ಬಳಸಿದ ಬ್ಯಾಟ್ ಮತ್ತು 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಧರಿಸಿದ್ದ ಜರ್ಸಿಯನ್ನು ಅಜರ್ ಅಲಿ ಆನ್ ಲೈನ್ ನಲ್ಲಿ ಹರಾಜಿಗೆ ಇಟ್ಟಿದ್ದರು.
Comments are closed.