ಮುಂಬೈ: ವಿಶ್ವದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಆಟಗಾರರ ಪಟ್ಟಿಯನ್ನು ಫೋರ್ಬ್ಸ್ ಪ್ರಕಟಿಸಿದೆ. ನೂರು ಜನ ಆಟಗಾರರ ಪಟ್ಟಿಯನ್ನು ಫೋರ್ಬ್ಸ್ ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಕ್ರಿಕೆಟಿಗನೆಂದರೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ.
ವಿರಾಟ್ ಕೊಹ್ಲಿ ಕಳೆದ ಮೂರು ವರ್ಷಗಳಿಂದ ವಿರಾಟ್ ಕೊಹ್ಲಿ ಅಗ್ರರ ನೂರರ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಿದ್ದಾರೆ. 2018ರಲ್ಲಿ 83 ಹಾಗೂ 2019ರಲ್ಲಿ ನೂರನೇ ಸ್ಥಾನದಲ್ಲಿದ್ದ ಕೊಹ್ಲಿ ಈ ವರ್ಷ ಭಾರಿ ಏರಿಕೆ ಕಂಡಿದ್ದಾರೆ. ಈ ವರ್ಷ ಕೊಹ್ಲಿ ಫೋರ್ಬ್ಸ್ ಅಗ್ರ ನೂರರ ಪಟ್ಟಿಯಲ್ಲಿ ಕೊಹ್ಲಿಗೆ 66ನೇ ಸ್ಥಾನದಲ್ಲಿದ್ದಾರೆ.
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಾರ್ಷಿಕ ಆದಾಯ ಸರಿಸುಮಾರು 196 ಕೋಟಿ ರೂ. ಆಗಿದ್ದು, ಕ್ರಿಕೆಟ್, ಜಾಹೀರಾತು ಮೂಲಗಳು ಕೊಹ್ಲಿ ಆದಾಯದ ಮೂಲಗಳಾಗಿವೆ.
Comments are closed.