ಅಂತರಾಷ್ಟ್ರೀಯ

ಪ್ಯಾರಾಲಿಂಪಿಕ್ಸ್‌ ಟೇಬಲ್ ಟೆನ್ನಿಸ್’ನಲ್ಲಿ ಬೆಳ್ಳಿ ಗೆದ್ದ ಭವಿನಾಬೆನ್‌ ಪಟೇಲ್‌‌’ಗೆ ಅಭಿನಂದನೆಗಳ ಮಹಾಪೂರ

Pinterest LinkedIn Tumblr

ಟೋಕಿಯೊ: ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಟೇಬಲ್‌‌‌ ಟೆನಿಸ್‌ ಆಟಗಾರ್ತಿ ಭವಿನಾಬೆನ್‌ ಪಟೇಲ್‌ ಅವರು ಬೆಳ್ಳಿ ಪದಕ ಗೆದ್ದಿದ್ದು ಅವರಿಗೆ ಅಭಿನಂದನೆಗಳ ಮಹಾಪೂರವೇ ಬಂದಿದೆ.

ಟೋಕಿಯೊದಲ್ಲಿ ನಡೆದ ಪ್ಯಾರಾಲಿಂಪಿಕ್ಸ್‌ನಲ್ಲಿ ಮಹಿಳಾ ಸಿಂಗಲ್ಸ್‌‌ ಕ್ಲಾಸ್‌‌ 4 ಸ್ಪರ್ಧೆಯ ಫೈನಲ್‌ನಲ್ಲಿ ಚೀನಾದ ಜೋ ಯಿಂಗ್‌‌‌ ವಿರುದ್ದ ಸೋತ ಬಳಿಕ ಭವಿನಾಬೆನ್‌‌‌ ಅವರ ಬೆಳ್ಳಿ ಪದಕ ಗೆದ್ದಿದ್ದಾರೆ.

ಜೋ ಯಿಂಗ್‌ ಮೊದಲ ಪಂದ್ಯವನ್ನು 11-7ರಿಂದ ಗೆದ್ದರಲ್ಲದೇ ಪಂದ್ಯದಲ್ಲಿ 1-0 ಮುನ್ನಡೆ ಸಾಧಿಸಿದರು. ಮುಂದಿನ ಸುತ್ತಿನಲ್ಲಿ ಯಿಂಗ್ ತನ್ನ ಪ್ರಾಬಲ್ಯ ಮುಂದುವರಿಸಿದ್ದು, ಮತ್ತೊಂದು ಆಟವನ್ನು 11-5ರಿಂದ ಗೆಲ್ಲುವಲ್ಲಿ ಯಶಸ್ವಿಯಾದರು.

ಅಂತಿಮವಾಗಿ ಚೀನಾದ ಜೋ ಯಿಂಗ್‌ 3-0 ಅಂತರದಿಂದ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಭುವಿನಾ ಬೆಳ್ಳಿಗೆ ತೃಪ್ತಿ ಪಡಬೇಕಾಯಿತು.

 

Comments are closed.