ನವದೆಹಲಿ: ಟೋಕಿಯೋ ಪ್ಯಾರಾ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಸಿಕ್ಕಿದೆ. ಭಾರತದ ಮಹಿಳಾ ಶೂಟರ್ ಅವನಿ ಲೇಖರ ಅವರು 10 ಮೀಟರ್ನ ಏರ್ ರೈಫಲ್ ಶೂಟಿಂಗ್ನಲ್ಲಿ ಚಿನ್ನ ಗೆಲ್ಲುವ ಮೂಲಕ ಭಾರತಕ್ಕೆ ಹೆಮ್ಮೆ ತಂದಿದ್ದಾರೆ.
ಇನ್ನು ಚೀನಾದ ಕ್ಯುಪಿಂಗ್ ಜಾಂಗ್ ಬೆಳ್ಳಿ ಗೆದ್ದರೆ ಉಕ್ರೇನ್ ದೇಶದ ಇರಿನಾ ಶ್ಚೆಟ್ನಿಕ್ ಕಂಚು ಪಡೆದಿದ್ದಾರೆ.
ಎಸ್ ಎಚ್ 1 ರೈಫಲ್ ವಿಭಾಗದಲ್ಲಿ ಅವನಿ ಲೆಖಾರಾ ಗನ್ ನ್ನು ಕೈಗಳಿಂದ ಬಂದೂಕನ್ನು ಹಿಡಿದುಕೊಳ್ಳಲು ಸಮರ್ಥರಾಗಿದ್ದರು. ಪ್ಯಾರಲಿಂಪಿಕ್ ನಲ್ಲಿ ಕ್ರೀಡಾಪಟುಗಳು ತಮ್ಮ ಕಾಲುಗಳಲ್ಲಿ ದುರ್ಬಲತೆ ಹೊಂದಿರುವವರು ಕುಳಿತುಕೊಂಡು ಸಾಧ್ಯವಾದವರು ನಿಂತುಕೊಂಡು ಸ್ಪರ್ಧಿಸುತ್ತಾರೆ.
Comments are closed.