ಅಂತರಾಷ್ಟ್ರೀಯ

ಪ್ಯಾರಾಲಿಂಪಿಕ್ಸ್​ನಲ್ಲಿ ಕನ್ನಡಿಗನ‌ ಸಾಧನೆ: ಬ್ಯಾಡ್ಮಿಂಟನ್​ನಲ್ಲಿ ಐಎಎಸ್ ಅಧಿಕಾರಿ ಸುಹಾಸ್​ಗೆ ಬೆಳ್ಳಿ

Pinterest LinkedIn Tumblr

ಟೋಕಿಯೋ: ವಿಶ್ವದ ನಂಬರ್ ಒನ್ ಆಟಗಾರ ಫ್ರಾನ್ಸ್​ನ ಲೂಕಸ್ ಮಜೂರ್ ವಿರುದ್ಧ ಸುಹಾಸ್ 1-2 ಸೆಟ್​ಗಳ ಅಂತರದಲ್ಲಿ ಸೋಲುವ ಮೂಲಕ ಬೆಳ್ಳಿ‌ಪದಕ ಪಡೆದು ಸಾಧನೆ ಮಾಡಿದ್ದಾರೆ.

ಪುರುಷರ ಬ್ಯಾಡ್ಮಿಂಟನ್ ಎಸ್ಎಲ್4 ವಿಭಾಗದ ರೋಚಕ ಫೈನಲ್ ಪಂದ್ಯದಲ್ಲಿ ಭಾರತದವರು ಅದರಲ್ಲೂ ಕನ್ನಡಿಗರಾದ ಸುಹಾಸ್ ಯತಿರಾಜ್ ಬೆಳ್ಳಿ ಪದಕ ಗೆದ್ದಿದ್ದಾರೆ.

ಪಂದ್ಯದ ಮೊದಲ ಸೆಟ್​ನಲ್ಲೇ ಸುಹಾಸ್ 21-15 ಮುನ್ನಡೆ ಪಡೆದುಕೊಂಡು ಚೊಚ್ಚಲ ಅಂಕ ಸಂಪಾದಿಸಿದರು. ಎರಡನೇ ರೌಂಡ್​ನಲ್ಲೂ ಎದುರಾಳಿ 17-21 ಮುನ್ನಡೆ ಪಡೆದುಕೊಂಡ ಪರಿಣಾಮ 1-1 ಅಂತರದ ಸಮಬಲವಾಯಿತು. ಇಲ್ಲಿಂದ ಪಂದ್ಯ ಮತ್ತಷ್ಟು ರೋಚಕತೆ ಸೃಷ್ಟಿಸಿತು. ಅಂತಿಮವಾಗಿ ಮೂರನೇ ಸೆಟ್​ನಲ್ಲಿ ಸುಹಾಸ್ 15-21 ಅಂಕಗಳ ಹಿನ್ನಡೆ ಸಾಧಿಸಿ 1-2 ಸೆಟ್​ಗಳ ಅಂತರದಿಂದ ಸೋತ ಪರಿಣಾಮ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಇದಕ್ಕೂ ಮುನ್ನ ನಿನ್ನೆ ಶನಿವಾರ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಸುಹಾಸ್ ಅವರು ಇಂಡೋನೇಷ್ಯಾದ ಫ್ರೆಡಿ ಸೆಟಿಯಾವನ್ ವಿರುದ್ಧ 21-9, 21-15ರ ಅಂತರದಲ್ಲಿ ಗೆಲುವು ದಾಖಲಿಸಿದ್ದರು.

ಸುಹಾಸ್ ಯತಿರಾಜ್ ನೋಯ್ಡಾದ ಗೌತಮ ಬುದ್ಧ ನಗರದ ಐಎಎಸ್ ಅಧಿಕಾರಿಯಾಗಿದ್ದಾರೆ. ಸುಹಾಸ್ ಸಂಪೂರ್ಣ ಹೆಸರು ಸುಹಾಸ್ ಲಾಲಿನಕೆರೆ ಯತಿರಾಜ್. ಶಿವಮೊಗ್ಗದಲ್ಲಿ ನೆಲೆಸಿರುವ ಸುಹಾಸ್ ಮೂಲತ: ಹಾಸನದವರು. ಪ್ಯಾರಾಒಲಿಂಪಿಕ್ಸ್ ಕೂಟದಲ್ಲಿ ಪದಕ ಗೆದ್ದ ಮೊದಲ ಐಎಎಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಹಾಸನದಲ್ಲಿ ಬಾಲ್ಯ ಹಾಗೂ ಶಿಕ್ಷಣ ಪೂರೈಸಿದ ಸುಹಾಸ್ ಯತಿರಾಜ್ ತಂದೆ ಸರ್ಕಾರಿ ಉದ್ಯೋಗಿಯಾದ ಕಾರಣ ದೆಹಲಿಗೆ ಸ್ಥಳಾಂತರಗೊಂಡಿದ್ದರು. ಮಂಗಳೂರಿನಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನೀಯರಿಂಗ್ ಪದವಿ ಪಡೆದ ಸುಹಾಸ್ ಇದೀಗ ದೇಶವೇ ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ.

Comments are closed.