ಕ್ರೀಡೆ

ಕಾರು ಅಪಘಾತದಲ್ಲಿ ಆಸ್ಟ್ರೇಲಿಯಾ ತಂಡದ ಮಾಜಿ ಕ್ರಿಕೆಟ್‌ ಆಟಗಾರ ಆಯಂಡ್ರ್ಯೂ ಸೈಮಂಡ್ಸ್ ನಿಧನ

Pinterest LinkedIn Tumblr

ಸಿಡ್ನಿ: ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ, ಐಪಿಎಲ್‌‌ನಲ್ಲಿ ಕೂಡ ಆಡಿದ್ದ ಆಲ್ ರೌಂಡರ್ ಆಯಂಡ್ರ್ಯೂ ಸೈಮಂಡ್ಸ್ ಕಾರು ಅಪಘಾತದಲ್ಲಿ ನಿಧನ ಹೊಂದಿದ್ದಾರೆ.

ಆಯಂಡ್ರ್ಯೂ ಸೈಮಂಡ್ಸ್ ಅವರು ಶನಿವಾರ ರಾತ್ರಿ ಕ್ವೀನ್ಸ್‌ಲ್ಯಾಂಡ್ ರಾಜ್ಯದ ಟೌನ್ಸ್‌ವಿಲ್ಲೆ ಹೊರವಲಯದಲ್ಲಿ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಇನ್ನು ಸೈಮಂಡ್ಸ್ ಅವರು 1998 ರಿಂದ 2009ರವರೆಗೆ ಕಾಂಗರೂ ನಾಡಿನ ಪರವಾಗಿ ಆಡಿದ್ದು, 26 ಟೆಸ್ಟ್, 198 ಏಕದಿನ ಮತ್ತು 14 ಟಿ20 ಪಂದ್ಯಗಳನ್ನಾಡಿದ್ದಾರೆ. 2008ರಿಂದ 2011ರವರೆಗೆ ಐಪಿಎಲ್ ನಲ್ಲಿ ಆಡಿರುವ ಸೈಮಂಡ್ಸ್ 39 ಪಂದ್ಯಗಳನ್ನಾಡಿದ್ದಾರೆ.

ಆಸ್ಟ್ರೇಲಿಯನ್ ಕ್ರಿಕೆಟ್ ಕಂಡ ಉತ್ತಮ ಆಲ್-ರೌಂಡರ್‌ಗಳಲ್ಲಿ ಒಬ್ಬರೆಂದು ಸೈಮಂಡ್ಸ್ ಅವರು ಭಾಜನರಾಗಿದ್ದರು.

Comments are closed.